ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆಗೆ ಮತ್ತೆ ಜೀವ : ಧರ್ಮಸಿಂಗ್‌-ದೇವೇಗೌಡ ಭೇಟಿ

By Staff
|
Google Oneindia Kannada News

ಸಂಪುಟ ವಿಸ್ತರಣೆಗೆ ಮತ್ತೆ ಜೀವ : ಧರ್ಮಸಿಂಗ್‌-ದೇವೇಗೌಡ ಭೇಟಿ
ಮುಂದಿನ ವಾರ ಸಂಪುಟ ವಿಸ್ತರಣೆ ಖಚಿತ!

ಬೆಂಗಳೂರು : ಮುಖ್ಯಮಂತ್ರಿ ಧರ್ಮಸಿಂಗ್‌ ಹಾಗೂ ಜಾತ್ಯತೀತ ಜನತಾದಳ ವರಿಷ್ಠ ಎಚ್‌.ಡಿ.ದೇವೇಗೌಡ ಬುಧವಾರ ಭೇಟಿಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ.

ಸಂಪುಟ ವಿಸ್ತರಣೆ ವಿಳಂಬದ ಬಗ್ಗೆ ಜೆಡಿಎಸ್‌ ಕಾರ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಿಗೇ ಧರ್ಮಸಿಂಗ್‌ ಹಾಗೂ ಗೌಡರ ಭೇಟಿ ನಡೆದಿದೆ. ಜಾತ್ಯತೀತ ಜನತಾದಳ ಶಾಸಕರ ಸಭೆಯ ನಂತರ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, ವಿಸ್ತರಣೆಗೆ ಡಿಸೆಂಬರ್‌ 13ರ ಗಡುವು ನೀಡಿದ್ದರು.

ಶಾಸಕರ ಅಸಮಾಧಾನ ಸ್ಫೋಟದ ಹಿನ್ನೆಲೆಯಲ್ಲಿ ಧರ್ಮಸಿಂಗ್‌ರನ್ನು ಭೇಟಿ ಮಾಡಲು ದೇವೇಗೌಡ ನಿರಾಕರಿಸಿದ್ದರು. ಹಿರಿಯ ಕಾಂಗ್ರೆಸ್‌ ನಾಯಕರೊಬ್ಬರ ಮಧ್ಯಸ್ಥಿಕೆಯಿಂದಾಗಿ ಗೌಡ ಹಾಗೂ ಧರ್ಮಸಿಂಗ್‌ ಭೇಟಿ ನಡೆದಿದೆ. ಗೌಡರ ಪುತ್ರ ಹಾಗೂ ಕಂದಾಯ ಸಚಿವ ಎಚ್‌.ಡಿ.ರೇವಣ್ಣ ಅವರ ನಿವಾಸದಲ್ಲಿ ಈ ಭೇಟಿ ನಡೆಯಿತು.

ಸಂಪುಟ ವಿಸ್ತರಿಸಲು ತಮಗೆ ಎದುರಾಗಿರುವ ಅಡಚಣೆಗಳ ಕುರಿತು ಧರ್ಮಸಿಂಗ್‌ ತಮ್ಮ ಭೇಟಿಯ ಕಾಲದಲ್ಲಿ ದೇವೇಗೌಡರಿಗೆ ವಿವರಿಸಿದ್ದು , ಗೌಡರು ಅಭಯ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ- ಸರ್ಕಾರ ಹಾಗೂ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ನಾವು ಅಗತ್ಯ ನೆರವು ನೀಡುತ್ತೇವೆ ಎಂದರು.

ಸೋನಿಯಾ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಧರ್ಮಸಿಂಗ್‌ ಬುಧವಾರ ರಾತ್ರಿ ದೆಹಲಿಗೆ ತೆರಳುವರು. ಕಾಂಗ್ರೆಸ್‌ನಿಂದ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯಾಂದಿಗೆ ಅವರು ವಾಪಸ್ಸಾಗಲಿದ್ದಾರೆ ಎಂದು ದೇವೇಗೌಡ ಹೇಳಿದರು. ಅಂದಹಾಗೆ, ಡಿ. 9 ರ ಗುರುವಾರ ಸೋನಿಯಾ ಹುಟ್ಟುಹಬ್ಬ .

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X