ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತೆ: ಮದುವೆ ವಾರ್ಷಿಕೋತ್ಸವಕ್ಕೆ ವಿಶೇಷ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್‌

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ತೂಗುದೀಪ ಹಾಗೂ ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ವಿಜಯಲಕ್ಷ್ಮಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್ ಸದ್ಯ ಭಾರಿ ವೈರಲ್ ಆಗುತ್ತಿದೆ. ಕಷ್ಟದ ದಿನಗಳಲ್ಲೂ ಪತಿಯ ಪರವಾಗಿ ಗಟ್ಟಿಯಾಗಿ ನಿಲ್ಲುವ ತಮ್ಮ ನಿರ್ಧಾರವನ್ನು ಅವರು ಈ ಪೋಸ್ಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ಬಿರುಗಾಳಿಯಲ್ಲೂ ನಿಮ್ಮ ಕೈ ಹಿಡಿದು ನಡೆಸುವೆ

ವಿವಾಹ ವಾರ್ಷಿಕೋತ್ಸವದ ವಿಶೇಷ ದಿನದಂದು ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಂತ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಸವಾಲಿನ ದಿನಗಳ ನಡುವೆಯೂ ತಾವು ಪತಿಯ ಪರವಾಗಿ ಕಲ್ಲುಬಂಡೆಯಂತೆ ನಿಲ್ಲುವುದಾಗಿ ಅವರು ಈ ಪೋಸ್ಟ್ ಮೂಲಕ ಸಾರಿದ್ದಾರೆ.

Vijayalakshmi Darshan

"ಪ್ರತಿಯೊಂದು ಬಿರುಗಾಳಿಯಲ್ಲೂ ಮತ್ತು ಪ್ರತಿಯೊಂದು ಮೌನದಲ್ಲೂ ನಾನು ನಿಮ್ಮ ಕೈ ಹಿಡಿದು ನಡೆಸುತ್ತೇನೆ. ಸನ್ನಿವೇಶಗಳು ನಮ್ಮನ್ನು ದೂರ ಮಾಡಲು ಎಷ್ಟೇ ಪ್ರಯತ್ನಿಸಿದರೂ, ನನ್ನ ಹೃದಯ ಯಾವಾಗಲೂ ನಿಮ್ಮನ್ನೇ ಆಯ್ಕೆ ಮಾಡುತ್ತದೆ. ಮತ್ತು ಇಡೀ ಜಗತ್ತೇ ನಿಮಗೆ ವಿರುದ್ಧವಾಗಿ ನಿಂತರೂ, ನಾನು ನಿಮ್ಮ ಪಕ್ಕದಲ್ಲೇ ನಿಲ್ಲುತ್ತೇನೆ, ಎಲ್ಲದರ ನಡುವೆಯೂ ನಿಮ್ಮನ್ನೇ ಆರಿಸಿಕೊಳ್ಳುತ್ತೇನೆ" ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.

Darshan: ಇಂದು ಮದುವೆ ವಾರ್ಷಿಕೋತ್ಸವ; ಹೆಂಡತಿ-ಮಗನ ಭೇಟಿಗೆ ದಯವಿಟ್ಟು ಅವಕಾಶ ಕೊಡಿ: ಜೈಲಾಧಿಕಾರಿಗಳಿಗೆ ನಟ ದರ್ಶನ್ ಮನವಿ
Darshan: ಇಂದು ಮದುವೆ ವಾರ್ಷಿಕೋತ್ಸವ; ಹೆಂಡತಿ-ಮಗನ ಭೇಟಿಗೆ ದಯವಿಟ್ಟು ಅವಕಾಶ ಕೊಡಿ: ಜೈಲಾಧಿಕಾರಿಗಳಿಗೆ ನಟ ದರ್ಶನ್ ಮನವಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್

ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಈ ಸಾಲುಗಳು ದರ್ಶನ್ ಅಭಿಮಾನಿಗಳ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಕೇವಲ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿವೆ. ಎಂತಹದೇ ಕಠಿಣ ಪರಿಸ್ಥಿತಿ ಎದುರಾದರೂ ಪತಿಯ ಕೈ ಬಿಡುವುದಿಲ್ಲ ಎಂಬ ಅವರ ದಿಟ್ಟತನ ಮತ್ತು ಪ್ರೀತಿಯ ಸಂದೇಶಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಹಳ ದಿನಗಳ ನಂತರ ವಿಜಯಲಕ್ಷ್ಮಿ ಅವರು ದರ್ಶನ್ ಪರವಾಗಿ ಇಷ್ಟೊಂದು ಆಳವಾದ ಮತ್ತು ಗಟ್ಟಿಯಾದ ಸಂದೇಶ ರವಾನಿಸಿರುವುದು ಸ್ಯಾಂಡಲ್‌ವುಡ್ ವಲಯದಲ್ಲೂ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ದೃಷ್ಟಿಯಾಗದಿರಲಿ ಎಂದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಮೊದಲ ಬಾರಿಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪತಿ ದರ್ಶನ್ ಅವರೊಂದಿಗೆ ಇರುವ ಮುದ್ದಾದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಸುದೀರ್ಘ ಕಾನೂನು ಹೋರಾಟದ ಬಳಿಕ ದರ್ಶನ್ ಅವರಿಗೆ ಮೊದಲ ಬಾರಿಗೆ ಜಾಮೀನು ಸಿಕ್ಕಿ ಹೊರಬಂದಾಗ ದಂಪತಿ ಒಟ್ಟಿಗೆ ಕ್ಲಿಕ್ಕಿಸಿಕೊಂಡಿದ್ದ ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಮುದ್ದಾದ ಫೋಟೋದೊಂದಿಗೆ ವಿಜಯಲಕ್ಷ್ಮಿ ಅವರು ಹೃದಯ ಹಾಗೂ ನಮ್ಮ ಪ್ರೀತಿಗೆ ಯಾರ ದೃಷ್ಟಿಯೂ ತಗುಲದಿರಲಿ ಎನ್ನುವ ಅರ್ಥದಲ್ಲಿ 'ದೃಷ್ಟಿ ನಿವಾರಕ ಇಮೋಜಿ'ಯನ್ನು ಕ್ಯಾಪ್ಷನ್ ಆಗಿ ಹಾಕಿದ್ದಾರೆ. ಇತ್ತ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹಾಗೂ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+