ಕೋಲಾ/ ಪೆಪ್ಸಿ ಬಾಟಲ್ ಮೇಲೆ ಕೀಟನಾಶಕ ಪ್ರಮಾಣ : ಕೋರ್ಟ್
ಕೋಲಾ/ ಪೆಪ್ಸಿ ಬಾಟಲ್ ಮೇಲೆ ಕೀಟನಾಶಕ ಪ್ರಮಾಣ : ಕೋರ್ಟ್
ರಾಜಸ್ಥಾನ ಹೈಕೋರ್ಟ್ ತೀರ್ಪಿಗೆ ಸುಪ್ರಿಂಕೋರ್ಟ್‌ನ ಅಧಿಕೃತ ಮುದ್ರೆ
ಈ ಹಿಂದೆ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪೆಪ್ಸಿ ಮತ್ತು ಕೋಲಾ ಕಂಪನಿಗಳು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ರಾಜಸ್ಥಾನ ಹೈಕೋರ್ಟ್‌ನ ತೀರ್ಪನ್ನು ಸುಪ್ರಿಂಕೋರ್ಟ್ ಎತ್ತಿಹಿಡಿದಿದೆ.
ಲಘುಪಾನೀಯಕ್ಕೆ ಬಳಸುವ ಎಲ್ಲಾ ಅಂಶಗಳನ್ನು ಮಾತ್ರವಲ್ಲದೆ ಅದರಲ್ಲಿರುವ ಕೀಟನಾಶಕದ ಪ್ರಮಾಣವನ್ನೂ ಬಾಟಲಿನ ಮೇಲೆ ಮುದ್ರಿಸಬೇಕು ಎನ್ನುವ ರಾಜಸ್ಥಾನ ಹೈಕೋರ್ಟ್ ತೀರ್ಪು ಪಾಲಿಸುವುದು ಕಷ್ಟ. ಲಘುಪಾನೀಯ ತಯಾರಿಕೆಯಲ್ಲಿ ಬಳಸಲಾಗುವ ನೀರು ಮತ್ತು ಸಕ್ಕರೆಯ ಜೊತೆ ಅತಿ ಕಡಿಮೆ ಕೀಟನಾಶಕಗಳು ಸೇರ್ಪಡೆಯಾಗುತ್ತದೆ ಎನ್ನುವ ವಾದವನ್ನು ಸುಪ್ರಿಂಕೋರ್ಟ್ ತಳ್ಳಿ ಹಾಕಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications