ಗೆಲುವಿನ ಹಾದಿಯಲ್ಲಿ ಸಾಗುತ್ತ , ಆಟ ಆಡುತ್ತಲೇ ಸಾವನ್ನಪ್ಪಿದ ಕ್ರಿಸ್ಟಿನೋ
ಗೆಲುವಿನ ಹಾದಿಯಲ್ಲಿ ಸಾಗುತ್ತ , ಆಟ ಆಡುತ್ತಲೇ ಸಾವನ್ನಪ್ಪಿದ ಕ್ರಿಸ್ಟಿನೋ
ಫುಟ್ಬಾಲ್ ಆಟಗಾರನ ದುರಂತ ಅಂತ್ಯ- ಸಾವಿನ ಬಗೆಗೊಂದು ಶಂಕೆ
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ(ಡಿ.5) ನಡೆದ 26ನೇ ಫೆಡರೇಷನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ದುರಂತ ಅಂತ್ಯ ಕಂಡಿತು. ಪಂದ್ಯ ಮುಗಿಯಲು ಕೇವಲ ಹನ್ನೇರಡು ನಿಮಿಷ ಬಾಕಿ ಇತ್ತು. ತನ್ನ ತಂಡದ ಗೆಲುವಿಗೆ ಬಹುವಾಗಿ ಶ್ರಮಿಸಿದ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ಎರಡನೇ ಗೋಲು ಹೊಡೆದರು. ಅಷ್ಟೇ, ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ನಂತರ ಮೇಲೆ ಏಳಲೇ ಇಲ್ಲ!
ಕೋಲ್ಕತ್ತದ ಪ್ರತಿಷ್ಠಿತ ಮೋಹನ್ ಬಾಗನ್ ತಂಡದ ವಿರುದ್ಧ, ಗೋವಾದ ಡೆಂಪೋ ಸ್ಪೋರ್ಟ್ಸ ತಂಡ ಗೆಲುವನ್ನು ಸಾಧಿಸಿದೆ. ಗೆಲುವಿನ ಖುಷಿಯನ್ನು ಕ್ರಿಸ್ಟಿಯಾನೋ ಸಾವು ಬದಿಗೆ ಸರಿಸಿದೆ. ಬ್ರೆಜಿಲ್ ಮೂಲದ ಕ್ರಿಸ್ಟಿಯಾನೋ ಡೆಲಿಮಾ ಜೂನಿಯರ್ ಇನ್ನು ನೆನಪು ಮಾತ್ರ.
ಕ್ರಿಸ್ಟಿಯಾನೋ ಅವರಿಗೆ ಎದುರಾಳಿ ತಂಡದ ಸುಬ್ರತೊ ಪಾಲ್ ಬೇಕೆಂದೆ ಎದೆಗೆ ಡಿಕ್ಕಿ ಹೊಡೆದ. ಈ ಕಾರಣ ಅವರ ಸಾವು ಸಂಭವಿಸಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಹೃದಯಾಘಾತವೆಂದು ಅಭಿಪ್ರಾಯಪಟ್ಟಿದ್ದಾರೆ.
ಬದುಕು : ಈತ ಇಲ್ಲಿ ಕುಸಿದು ಬಿದ್ದಿದ್ದ. ಹೃದಯ ತನ್ನ ಕೆಲಸವನ್ನು ನಿಧಾನವಾಗಿ ನಿಲ್ಲಿಸುತ್ತಿದ್ದರೇ, ಅಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯುತ್ತಿತ್ತು!
ಕ್ರಿಸ್ಟಿಯಾನೋ ಕುಟುಂಬಕ್ಕೆ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಒಂದು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ.
(ಇನ್ಪೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications