ಮದುವೆಯಾ? ಹೌದು, ಹನಿಮೂನ್? ಇಲ್ಲ -ಭೈಚುಂಗ್ ಭುಟಿಯಾ
ಮದುವೆಯಾ? ಹೌದು, ಹನಿಮೂನ್? ಇಲ್ಲ -ಭೈಚುಂಗ್ ಭುಟಿಯಾ
ಡಿಸೆಂಬರ್‌ನಲ್ಲಿ ಭುಟಿಯಾ ಮದುವೆ, ಜನವರಿಯಲ್ಲಿ ರಾಷ್ಟ್ರೀಯ ಫುಟ್‌ಬಾಲ್ ಲೀಗ್
ಹೌದು.
ಹನಿಮೂನ್?
ಇಲ್ಲ .
ಭಾರತದ ಪುಟ್‌ಬಾಲ್ ತಾರೆ ಭೈಚುಂಗ್ ಭುಟಿಯಾ ಹಾಗೂ ಸುದ್ದಿಗಾರರ ನಡುವೆ ಡಿ.1ರ ಬುಧವಾರ ನಡೆದ ಮಾತುಕತೆಯಿದು. ಡಿಸೆಂಬರ್ 30ರಂದು ಭುಟಿಯಾ ಮದುವೆ. ಮದುವೆ ವಿಷಯ ಕೇಳಿದಾಗ ರಂಗೇರಿದ ಭುಟಿಯಾ, ಹನಿಮೂನ್ ಮಾತಿಗೆ ಬಂದಾಗ ಕೊಂಚ ನಿರಾಶೆಯಿಂದ ತಲೆ ಅಲ್ಲಾಡಿಸಿದರು. ಪಾಪ, ಅವರು ಹನಿಮೂನ್ ಹೋಗುತ್ತಿಲ್ಲ !
2005ರ ಜನವರಿಯಲ್ಲಿ ನಡೆಯುವ ರಾಷ್ಟ್ರೀಯ ಫುಟ್‌ಬಾಲ್ ಲೀಗ್‌ನಲ್ಲಿ ಆಡುತ್ತಿರುವ ಭುಟಿಯಾರಿಗೆ ಹನಿಮೂನ್ ತಪ್ಪಿಸಿಕೊಳ್ಳುವುದು ಅನಿವಾರ್ಯ. ಅಂದಹಾಗೆ, ಭುಟಿಯಾ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮಾಧುರಿ.
ನನ್ನ ಹಾಗೂ ಮಾಧುರಿ ಗೆಳೆತನ ದೀರ್ಘ ಕಾಲದ್ದು , ಏಳೆಂಟು ವರ್ಷಗಳದ್ದು . ಇಬ್ಬರೂ ಗೆಳೆಯರು. ಗೆಳೆತನ ಪ್ರೇಮಕ್ಕೆ ತಿರುಗಿತು ಎಂದು ಭುಟಿಯಾ ತಪ್ಪೊಪ್ಪಿಕೊಂಡರು.
ಅಸ್ಸಾಂ ಮೂಲದ ಭುಟಿಯಾ ಕೊಲ್ಕಾತ್ತಾದ ಈಸ್ಟ್ ಬೆಂಗಾಲ್ ತಂಡದ ಆಟಗಾರ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications