ಇರುಳಲ್ಲಿ ತಾಜ್‌ಮಹಲ್‌ ವೀಕ್ಷಿಸಲು ಸುಪ್ರಿಂಕೋರ್ಟ್‌ ಹಸಿರುನಿಶಾನೆ

ಇರುಳಲ್ಲಿ ತಾಜ್‌ಮಹಲ್‌ ವೀಕ್ಷಿಸಲು ಸುಪ್ರಿಂಕೋರ್ಟ್‌ ಹಸಿರುನಿಶಾನೆ
ತಾಜ್‌ಮಹಲ್‌ಗೆ 350 ವರ್ಷದ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ನವದೆಹಲಿ : ಪ್ರೇಮಿಗಳಿಗೊಂದು ಸಂತಸದ ಸುದ್ದಿ . ಪ್ರೇಮದ ಮೇರು ಸ್ಮಾರಕ ವಿಶ್ವಖ್ಯಾತ ತಾಜ್‌ಮಹಲ್‌ನ ಸೊಬಗನ್ನು ಇನ್ನುಮುಂದೆ ಚಂದಿರನ ತಂಪುಹೊತ್ತಿನಲ್ಲೂ ಸವಿಯಬಹುದು.

ರಾತ್ರಿವೇಳೆ ಸಾರ್ವಜನಿಕರು ತಾಜ್‌ಮಹಲ್‌ ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರಿಂಕೋರ್ಟ್‌ ನ.27ರ ಗುರುವಾರ ಆದೇಶಿಸಿದೆ. ಇದರೊಂದಿಗೆ ವಿಶ್ವಖ್ಯಾತ ಸ್ಮಾರಕವನ್ನು ಹುಣ್ಣಿಮೆ ಇರುಳಿನಲ್ಲಿ ನೋಡುವ ಆಸೆಯಿಟ್ಟುಕೊಂಡ ಅನೇಕರ ಕನಸುಗಳಿಗೆ ನೀರೆರೆದಂತಾಗಿದೆ.

ಭದ್ರತೆಯ ಕಾರಣಗಿಳಂದಾಗಿ ರಾತ್ರಿ ವೇಳೆ ತಾಜ್‌ ವೀಕ್ಷಿಸಲು ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಿತ್ತು . ಅಂದಹಾಗೆ, ತಾಜ್‌ಮಹಲ್‌ಗೆ 350 ವರ್ಷದ ಸಂದರ್ಭದಲ್ಲಿ ಪ್ರೇಮದ ಸ್ಮಾರಕವನ್ನು ವೀಕ್ಷಿಸಲು ಆಗಮಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+