ಬೆಂಗಳೂರಿನಲ್ಲಿ ಮೆಟ್ರೋ ರೈಲು ಯೋಜನೆ ಜಾರಿಗೆ ಖರ್ಗೆ ಒತ್ತಾಯ
ಬೆಂಗಳೂರಿನಲ್ಲಿ ಮೆಟ್ರೋ ರೈಲು ಯೋಜನೆ ಜಾರಿಗೆ ಖರ್ಗೆ ಒತ್ತಾಯ
ಬಿಎಂಟಿಸಿ ಕೃಪೆಯಿಂದ ಬಡಬೋರೇ ಗೌಡನಿಗೂ ವೋಲ್ವೋ ಬಸ್
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಖರ್ಗೆ- ನಗರದ ಸಂಚಾರ ವ್ಯವಸ್ಥೆಯ ಸುಧಾರಣೆಗಾಗಿ ವಿದೇಶ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿದ್ದೇನೆ. ನಗರಕ್ಕೆ ಮೆಟ್ರೋ ರೈಲು ಸೌಲಭ್ಯ ಅತ್ಯಗತ್ಯ. ಯೂರೋಪಿನ ಬಹುತೇಕ ಎಲ್ಲಾ ನಗರಗಳಲ್ಲೂ ಈ ಸೌಲಭ್ಯವಿದೆ ಎಂದರು.
ನಗರದಲ್ಲಿ ಈ ಯೋಜನೆ ಜಾರಿಗೆ ಬಂದರೆ ಶೇ. 40 ರಷ್ಟು ವಾಹನದಟ್ಟನೆ ಕಡಿಮೆಯಾಗಲಿದೆ. ಸುಮಾರು 4,899 ಕೋಟಿ ವೆಚ್ಚದ ಯೋಜನೆಯ ಅನುಷ್ಠಾನಕ್ಕಾಗಿ ಸರಕಾರ, ರಸ್ತೆ ಸುಂಕದ ಮೂಲಕ 600 ಕೋಟಿ ರೂ. ಸಂಗ್ರಹಿಸಿದೆ. ಯೋಜನೆಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿಗಳು ಈಗಾಗಲೇ ಯೋಜನಾ ಆಯೋಗದ ಉಪಾಧ್ಯಕ್ಷ ಡಾ.ಮೊಂಟೆಕ್ ವಾಲಿಯಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೇಂದ್ರ ಪಾಲುದಾರಿಕೆಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಖರ್ಗೆ ಒತ್ತಾಯಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications