ಪ್ರಾಜೆಕ್ಟ್‌ ಶಿಕ್ಷಾ : ರಾಜ್ಯದ 20000 ಶಿಕ್ಷಕರಿಗೆ ಮೈಕ್ರೊಸಾಫ್ಟ್‌ ತರಬೇತಿ

ಪ್ರಾಜೆಕ್ಟ್‌ ಶಿಕ್ಷಾ : ರಾಜ್ಯದ 20000 ಶಿಕ್ಷಕರಿಗೆ ಮೈಕ್ರೊಸಾಫ್ಟ್‌ ತರಬೇತಿ
ಬೆಂಗಳೂರು, ಗುಲ್ಬರ್ಗಾ, ಧಾರವಾಡದಲ್ಲಿ ಮೈಕ್ರೊಸಾಫ್ಟ್‌ ಐ.ಟಿ. ಅಕಾಡೆಮಿ ಕೇಂದ್ರ

ಬೆಂಗಳೂರು : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನ ಮುಟ್ಟಿಸುವ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ ಶಿಕ್ಷಾ ಯೋಜನೆಗೆ ರಾಜ್ಯ ಸರ್ಕಾರ ಮೈಕ್ರೋಸಾಫ್ಟ್‌ ಕಂಪನಿಯಾಂದಿಗೆ ಒಪ್ಪಂದಕ್ಕೆ ಬಂದಿದೆ.

ಐದು ವರ್ಷಗಳಲ್ಲಿ 20 ಸಾವಿರ ಶಿಕ್ಷಕರಿಗೆ ಮತ್ತು ನಾಲ್ಕು ಲಕ್ಷ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ತರಬೇತಿ ನೀಡುವ ನೂತನ ಯೋಜನೆ ಇದಾಗಿದೆ.. ಈ ಯೋಜನೆ ಅನುಷ್ಠಾನದ ಒಪ್ಪಂದಕ್ಕೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಮತ್ತು ಮೈಕೋಸಾಫ್ಟ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಕೌಲ್‌ ಸೋಮವಾರ ಸಹಿ ಹಾಕಿದರು.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ನೂತನ ಯೋಜನೆ ಮೂಲಕ ಕನಿಷ್ಠ 20ಸಾವಿರ ಶಿಕ್ಷಕರಿಗೆ ತಲಾ 12 ದಿನಗಳ ಕಾಲ ತರಬೇತಿ ನೀಡಲಾಗುವುದು. ಇದಕ್ಕಾಗಿ ಬೆಂಗಳೂರು, ಗುಲ್ಬರ್ಗಾ ಮತ್ತು ಧಾರವಾಡದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಮೈಕ್ರೊಸಾಫ್ಟ್‌ ಐ.ಟಿ. ಅಕಾಡೆಮಿ ಕೇಂದ್ರಗಳನ್ನು ಆರಂಭಿಸಲಾಗುವುದು ಮತ್ತು ಉತ್ತಮ ತರಬೇತಿದಾರರನ್ನು ಮತ್ತು ಪಠ್ಯಗಳನ್ನು ಒದಗಿಸಲಾಗುವುದು.

ತರಬೇತಿ ಪಡೆದ ಶಿಕ್ಷಕರಿಗೆ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿ ಪಡೆಯುವ ಶಿಕ್ಷಕರನ್ನು ಡಿ.ಎಸ್‌.ಇ.ಆರ್‌.ಟಿ ಆಯ್ಕೆ ಮಾಡಲಿದೆ ಎಂದು ವಿಜಯ ಭಾಸ್ಕರ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+