Get Updates
Get notified of breaking news, exclusive insights, and must-see stories!

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಮಾಂಡೋವಿ ಹರಸಿದ ಪಣಜಿ ಸಿದ್ಧ

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಮಾಂಡೋವಿ ಹರಸಿದ ಪಣಜಿ ಸಿದ್ಧ
ನ.29ರಿಂದ 11ದಿನಗಳ ಗೋವಾದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರಂಗುಗುಂಗು

ಬೆಂಗಳೂರು : 35ನೇ ಅಖಿಲ ಭಾರತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗೋವಾದ ರಾಜಧಾನಿ ಪಣಜಿಯಲ್ಲಿ ನ.29ರಿಂದ ಆರಂಭವಾಗಲಿದೆ. 11 ದಿನಗಳ ಈ ಉತ್ಸವಕ್ಕೆ ಗೋವಾ ನಗರಿ ಸಜ್ಜುಗೊಂಡಿದೆ ಎಂದು ಗೋವಾ ಮನರಂಜನಾ ಸಮಾಜದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಜಿತ್‌ ರಾಡ್ರಿಗ್ಸ್‌ ತಿಳಿಸಿದ್ದಾರೆ.

ದೇಶ-ವಿದೇಶಗಳಿಂದ 3000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ನಿರ್ದೇಶಕರು, ನಟ-ನಟಿಯರು, ಚಿತ್ರ ನಿರ್ಮಾಪಕರು, ಚಲನಚಿತ್ರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚಿತ್ರೋತ್ಸವದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಚೆನ್ನೈ, ಕೋಲ್ಕತ್ತಾ ಮತ್ತು ಪುಣೆ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳಿಗೆ ಚಲಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತೀಯ ಪನೋರಮಾದ ಅನೇಕ ಚಿತ್ರಗಳು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ರಾಡ್ರಿಗ್ಸ್‌ ಹೇಳಿದರು.

ಜಾಗತಿಕ ಚಿತ್ರವಿಭಾಗದಲ್ಲಿ ವಿವಿಧ ದೇಶಗಳ 67 ಚಿತ್ರಗಳು ಪ್ರದರ್ಶಿತಗೊಳ್ಳಲಿದೆ. ಏಷ್ಯನ್‌ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ 15ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಅಧ್ಯಕ್ಷತೆಯಲ್ಲಿ ತೀರ್ಪುಗಾರರ ತಂಡ ರಚಿಸಲಾಗಿದೆ ಎಂದರು.

ಚಲಚಿತ್ರೋತ್ಸವಕ್ಕಾಗಿ ವಿಶೇಷ ಕಲಾ ಪ್ರದರ್ಶನ, ವಿಶೇಷ ರೆಸ್ಟೋರೆಂಟ್‌, ಉತ್ಸವದ ಮಾರುಕಟ್ಟೆ ಮುಂತಾದವುಗಳನ್ನು ಮಾಂಡೋವಿ ದಂಡೆಯುದ್ದಕ್ಕೂ ಸಿದ್ಧಪಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ ಫಿಲಂ ಬಜಾರ್‌ ಸ್ಥಾಪಿಸಲು ಯೋಜಿಸಿದೆ ಎಂದು ರಾಡ್ರಿಗ್ಸ್‌ ತಿಳಿಸಿದರು.

ಚಲಚಿತ್ರೋತ್ಸವಕ್ಕೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08322428111 ಸಂಪರ್ಕಿಸಬಹುದು. ಇ-ಮೇಲ್‌: [email protected]

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+