ಆಟೋದ ಮೇಲೆ ರಿಕ್ಷಾ ಚಾಲಕರ ಜಾತಕ ; ಪ್ರಯಾಣಿಕರು ಸುರಕ್ಷಿತ !
ಬೆಂಗಳೂರು : ಬೆಂಗಳೂರಿನಲ್ಲಿ ಸಂಚರಿಸುವ ರಿಕ್ಷಾಗಳಲ್ಲಿ ಚಾಲಕರು ತಮ್ಮ ಡ್ರೆೃವಿಂಗ್ ಲೈಸನ್ಸ್, ವಿಳಾಸ ಮತ್ತಿತರ ಎಲ್ಲಾ ವಿವರಗಳನ್ನು ಪ್ರಯಾಣಿಗರಿಗೆ ಕಾಣುವಂತೆ ಪ್ರದರ್ಶಿಸಬೇಕು! ಇಂಥದೊಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ನಗರದ ಪೋಲೀಸರು ಚಿಂತನೆ ನಡೆಸಿದ್ದಾರೆ.
ಉದ್ದೇಶಿತ ವ್ಯವಸ್ಥೆಯಿಂದ ಆಟೋ ರಿಕ್ಷಾಗಳಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಸಿಗುತ್ತದೆ. ಪ್ರಯಾಣಿಕರೊಂದಿಗಿನ ರಿಕ್ಷಾ ಚಾಲಕರ ದುರ್ನಡತೆಗೆ ಕಡಿವಾಣ ಬೀಳುತ್ತದೆ. ಅಸಭ್ಯವಾಗಿ ವರ್ತಿಸುವ, ಅಪರಾಧವೆಸಗುವ ಚಾಲಕರ ಬಗೆಗೆ ಪೋಲೀಸರಿಗೆ ದೂರು ಸಲ್ಲಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಬೆಂಗಳೂರು ಪೋಲೀಸ್ ಕಮೀಷನರ್ ಎ. ಮರಿಸ್ವಾಮಿ.
ಸಿಂಗಾಪುರ ಮತ್ತಿತರ ರಾಷ್ಟ್ರಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಸುಮಾರು 76 ಸಾವಿರ ಆಟೋರಿಕ್ಷಾಗಳು ನಗರದಲ್ಲಿದ್ದು, ಅದರ ಎರಡರಷ್ಟು ರಿಕ್ಷಾಚಾಲಕರು ನಗರದಲ್ಲಿದ್ದಾರೆ. ಆಟೋ ಮೇಲೆ ವಿವರಗಳನ್ನು ನಮೂದಿಸುವ ವ್ಯವಸ್ಥೆಯಿಂದ ಅವರನ್ನು ಗುರ್ತಿಸುವುದು ಸುಲಭವಾಗುತ್ತದೆ. ಅಲ್ಲದೇ ರಿಕ್ಷಾಗಳ ದುರುಪಯೋಗ ತಪ್ಪುತ್ತದೆ. ಸಾಕಷ್ಟು ಕ್ರಿಮಿನಲ್ ಪ್ರಕರಣಗಳ ಪತ್ತೆಗೆ ಸುಲಭವಾಗುತ್ತದೆ.
ಅಂದಹಾಗೆ, ರಿಕ್ಷಾ ಮತ್ತು ಟ್ಯಾಕ್ಸಿ ಸಂಘಟನೆಯ ಅಧ್ಯಕ್ಷ ಎಂ.ಮಂಜುನಾಥ್ ಆಟೋ ಮೇಲೆ ವಿವರಗಳನ್ನು ನಮೂದಿಸುವ ವ್ಯವಸ್ಥೆಯನ್ನು ಸ್ವಾಗತಿಸಿದ್ದಾರೆ.(ಇನ್ಫೋ ವಾರ್ತೆ)












Click it and Unblock the Notifications