ರುಪಾಯಿ 1499ಕ್ಕೆ ಮೊಬೈಲ್ ಫೋನೂ... ಏರ್‌ಟೆಲ್ ಸಂಪರ್ಕವೂ !
ರುಪಾಯಿ 1499ಕ್ಕೆ ಮೊಬೈಲ್ ಫೋನೂ... ಏರ್‌ಟೆಲ್ ಸಂಪರ್ಕವೂ !
ಮೊಬೈಲ್ ಕಂಪನಿಗಳ ನಡುವೆ ಶುರುವಾಗಿದೆ ಸಮರ- ಗ್ರಾಹಕರಿಗೆ ವರ
ಶುಕ್ರವಾರ(ನ.19) ಕೋಲ್ಕತಾದಲ್ಲಿ ಹೊಸ ಯೋಜನೆಯಾಂದನ್ನು ಏರ್‌ಟೆಲ್ ಪ್ರಕಟಿಸಿದ್ದು, ಆಕರ್ಷಕ ಹ್ಯಾಂಡ್ ಸೆಟ್‌ನೊಂದಿಗೆ ಮೊಬೈಲಿಗರಾಗುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಿದೆ. ಮೋಟರೋಲ (ಸಿ115) ಹ್ಯಾಂಡ್ ಸೆಟ್‌ನೊಂದಿಗೆ ಎರಡು ರೀತಿಯ ಪ್ಯಾಕೇಜ್‌ನ್ನು ಏರ್‌ಟೆಲ್ ಪ್ರಕಟಿಸಿದೆ.
ಕೇವಲ ರೂ.1999 ನೀಡಿ, ಏರ್‌ಟೆಲ್ ಪ್ರೀಪೆಯ್ಡ್ ಸಂಪರ್ಕವನ್ನು ಹ್ಯಾಂಡ್‌ಸೆಟ್‌ನೊಂದಿಗೆ ಪಡೆಯಬಹುದು. ಅದು ಬೇಡ ಅನ್ನಿಸಿದರೆ, ಕೇವಲ ರೂ.1499 ಕ್ಕೆ ಹ್ಯಾಂಡ್‌ಸೆಟ್‌ನೊಂದಿಗೆ ಏರ್‌ಟೆಲ್ ಪೋಸ್ಟ್‌ಪೆಯ್ಡ್ ಸಂಪರ್ಕ ನಿಮ್ಮದಾಗುತ್ತದೆ.
ಮೊಬೈಲ್ ಕ್ಷೇತ್ರದಲ್ಲಿ ನಾನಾ ಕಸರತ್ತುಗಳ ಮೂಲಕ ಗ್ರಾಹಕರ ಸೆಳೆಯುವ ಪ್ರಯತ್ನ ಮುಂದುವರೆದಿದೆ. ವಿವಿಧ ಆಮೀಷಗಳ ಗ್ರಾಹಕರ ಕೈಗೆ ಮೊಬೈಲ್ ತುರುಕುವ ತಿಣುಕಾಟ ನಡೆಯುತ್ತಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications