ಅವರ್ನ ಬಿಟ್, ಇವರ್ನ ಬಿಟ್ ಜಗದೀಶ ಶೆಟ್ಟರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷತೆ
ಅವರ್ನ ಬಿಟ್, ಇವರ್ನ ಬಿಟ್ ಜಗದೀಶ ಶೆಟ್ಟರ್‌ಗೆ ಬಿಜೆಪಿ ರಾಜ್ಯಾಧ್ಯಕ್ಷತೆ
ಅನಂತ್ ಬಣಕ್ಕೆ ಖುಷಿ, ಯಡಿಯೂರಪ್ಪ ಬಣಕ್ಕೆ ಕಸಿವಿಸಿ.
ಪ್ರಬಲ ಲಿಂಗಾಯತ ಕೋಮಿಗೆ ಸೇರಿದ ಶೆಟ್ಟರ್ ನ.20 ರಂದು ಅಧಿಕಾರ ಸ್ವೀಕರಿಸುವರು. ಪ್ರತಿಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದ 47 ವರ್ಷದ ಶೆಟ್ಟರ್ ಸಂಘ ಪರಿವಾರದಲ್ಲಿ ಗುರ್ತಿಸಿಕೊಂಡಿದ್ದವರು. ಅನಂತ್‌ಕುಮಾರ್ ರಾಷ್ಟ್ರ ರಾಜಕಾರಣಕ್ಕೆ ಮರಳಿದ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಸದ ಎಸ್. ಬಂಗಾರಪ್ಪ, ಡಿ.ವಿ. ಸದಾನಂದ ಗೌಡ, ಶಾಸಕ ಆರ್. ಅಶೋಕ್, ರಾಮಚಂದ್ರ ಗೌಡ ಮತ್ತಿತರರು ತೀವ್ರ ಪೈಪೋಟಿ ನಡೆಸಿದ್ದರು.
ಬಿಜೆಪಿಯಲ್ಲಿನ ಗುಂಪುಗಾರಿಕೆಗಳು ಅಧ್ಯಕ್ಷ ಸ್ಥಾನದ ಸ್ಪರ್ಧೆಯ ಹಿನ್ನೆಲೆಯಲ್ಲಿ ಸ್ಫೋಟಿಸಿದ್ದವು. ಅನಂತ್ ಕುಮಾರ್ ಮತ್ತು ಬಂಗಾರಪ್ಪ ಬಣಗಳು ಶೆಟ್ಟರ್ ಆಯ್ಕೆಯ ಹಿಂದೆ ನಿಂತಿವೆ. ಯಡಿಯೂರಪ್ಪ ಮತ್ತು ಶಂಕರಮೂರ್ತಿ ಬಣಗಳಿಗೆ ಈ ಬೆಳವಣಿಗೆಯಿಂದ ಮುಖಭಂಗವಾಗಿದೆ.
ಪಕ್ಷದ ಆಯ್ಕೆಗೆ ತಲೆಬಾಗುವುದಾಗಿ ಪ್ರತಿಕ್ರಿಯಿಸಿರುವ ಸಂಸದ ಎಸ್. ಬಂಗಾರಪ್ಪ , ಶೆಟ್ಟರ್ ಆಯ್ಕೆಯನ್ನು ಸ್ವಾಗತಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications