ಪೆಟ್ರೋಲ್ ದರದಲ್ಲಿ ತುಸು ಇಳಿಮುಖ- ಲೀಟರ್‌ಗೆ ರೂ.1.26 ಕಡಿತ
ಪೆಟ್ರೋಲ್ ದರದಲ್ಲಿ ತುಸು ಇಳಿಮುಖ- ಲೀಟರ್‌ಗೆ ರೂ.1.26 ಕಡಿತ
ಅಂತರಾಷ್ಟ್ರೀಯ ತೈಲ ಬೆಲೆ ಕುಸಿತ, ಡೀಸೆಲ್-ಅಡುಗೆ ಅನಿಲ ದರದಲ್ಲಿ ವ್ಯತ್ಯಾಸವಿಲ್ಲ
ಸೋಮವಾರ(ನ.15) ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಕಡಿತ ಮಾಡಲಾಗಿದೆ. ಆದರೆ ಡೀಸೆಲ್ ಹಾಗೂ ಎಲ್‌ಪಿಜಿ ದರದಲ್ಲಿ ಯಾವುದೇ ಇಳಿಕೆಯನ್ನು ಮಾಡಲಾಗಿಲ್ಲ. ಪೆಟ್ರೋಲ್ ದರ ಅಂತರಾಷ್ಟ್ರೀಯ ದರಕ್ಕೆ ಸಮಾನವಾಗಿದ್ದರೆ, ಡೀಸೆಲ್ ಬೆಲೆ ಅದಕ್ಕಿಂತ ಲೀಟರ್‌ಗೆ ರೂ.1.24 ರಷ್ಟು ಕಡಿಮೆ ಇದೆ. ಹಿಂದಿನ ನಷ್ಟ ತುಂಬಿಕೊಳ್ಳಲು ಡೀಸೆಲ್ ದರ ಕಡಿಮೆ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 4ರಂದು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ.2.20 ರಷ್ಟು ಹೆಚ್ಚಿಸಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications