ಬೆಂಗಳೂರು ಮಹಾನಗರ ಪಾಲಿಕೆಯಿಂದ ‘ಆರೋಗ್ಯ ನಗರಿ ಕಾರ್ಡ್’
ಬೆಂಗಳೂರು ಮಹಾನಗರ ಪಾಲಿಕೆಯಿಂದ ‘ಆರೋಗ್ಯ ನಗರಿ ಕಾರ್ಡ್’
ಆರೋಗ್ಯ ನಗರಿಯಾಗಿ ರೂಪುಗೊಳ್ಳುವ ಹಾದಿಯಲ್ಲಿ ಸೌಹಾರ್ದ ನಗರಿ
ಬೆಂಗಳೂರಿನ ನಾಗರಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ನಗರಿ ಕಾರ್ಡ್‌ಗಳನ್ನು ರೂಪಿಸಲಾಗಿದೆ. ತುರ್ತು ಮತ್ತು ಉಚಿತ ಆ್ಯಂಬುಲೆನ್ಸ್ , ಉಚಿಕ ಅರ್ಧವಾರ್ಷಿಕ ಆರೋಗ್ಯ ತಪಾಸಣೆ, ರಿಯಾಯಿತಿ ದರದಲ್ಲಿ ವಿಶೇಷ ಚಿಕಿತ್ಸೆ ಮತ್ತು ತಪಾಸಣೆಗಳ ಸೌಲಭ್ಯ ಕಾರ್ಡ್‌ದಾರರಿಗೆ ದೊರೆಯಲಿದೆ
ಬೆಂಗಳೂರಿನ ನಾಗರಿಕರ ಆರೋಗ್ಯ ಸ್ಥಿತಿಗತಿಯ ದಾಖಲೆಗಳನ್ನು ಸಂಗ್ರಹಿಸುವ ಉದ್ದೇಶವನ್ನು ಆರೋಗ್ಯ ಕಾರ್ಡ್‌ಗಳು ಹೊಂದಿವೆ. ಸ್ಮಾರ್ಟ್ ಕಾರ್ಡ್‌ಗಳಿಂದಾಗಿ ದತ್ತಾಂಶಗಳ ದಾಖಲೆ ಸಾಧ್ಯವಾಗಲಿದೆ.
ಹಿರಿಯ ನಾಗರಿಕರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ಬೆಂಗಳೂರು ಮೇಯರ್ ಪಿ.ಆರ್.ರಮೇಶ್- ಬೆಂಗಳೂರು ಈವರೆಗೂ ಸೌಹಾರ್ದ ನಗರಿಯಾಗಿತ್ತು . ಇನ್ನು ಮುಂದೆ ಆರೋಗ್ಯ ನಗರಿಯಾಗಿಸುವ ನಿಟ್ಟಿನಲ್ಲಿ ನಗರಪಾಲಿಕೆ ಮುನ್ನಡೆದಿದೆ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications