ಸೈಬರ್‌ಕೆಫೆ ಗ್ರಾಹಕರಿಗೆ ಗುರುತಿನಚೀಟಿ ಕಡ್ಡಾಯ-ಸರ್ಕಾರದ ಆದೇಶ

ಸೈಬರ್‌ಕೆಫೆ ಗ್ರಾಹಕರಿಗೆ ಗುರುತಿನಚೀಟಿ ಕಡ್ಡಾಯ-ಸರ್ಕಾರದ ಆದೇಶ
ಸೈಬರ್‌ ಅಪರಾಧಗಳಿಗೆ ಕಡಿವಾಣ ಹಾಕಲು ಸರಕಾರದ ಹೊಸ ಕಾಯ್ದೆ

ಬೆಂಗಳೂರು : ಅಂತರ್ಜಾಲದ ಮೂಲಕ ಹೆಚ್ಚುತ್ತಿರುವ ಸಮಾಜಘಾತುಕ ಚಟುವಟಿಕೆಗಳನ್ನು ನಿಯಂತ್ರಿಸಲು ರಾಜ್ಯಸರ್ಕಾರ ಹೊಸ ಕಾಯ್ದೆಯನ್ನು ಹೊರಡಿಸಿದೆ. ಇನ್ನು ಮುಂದೆ ಸೈಬರ್‌ ಗ್ರಾಹಕರಿಗೆ ಗುರುತಿನ ಚೀಟಿ ಕಡ್ಡಾಯ.

ಸೈಬರ್‌ ಕೆಫೆ ಮಾಲೀಕರು ತಮ್ಮ ಗ್ರಾಹಕರ ಗುರುತಿನ ಚೀಟಿಯನ್ನು ಕಾಯ್ದಿರಿಸಿಕೊಳ್ಳಬೇಕು. ಗುರುತಿನ ಚೀಟಿ ಇಲ್ಲದ ಗ್ರಾಹಕರ ಡಿಜಿಟಲ್‌ ಭಾವಚಿತ್ರತೆಗೆದು, ಕನಿಷ್ಠ ಒಂದು ವರ್ಷ ತಮ್ಮ ಬಳಿಯೇ ಕಾಯ್ದಿರಿಸಿಕೊಳ್ಳಬೇಕು. ಈ ನಿಯಮವನ್ನು ಪಾಲಿಸದ ಸೈಬರ್‌ ಕೆಫೆ ಮಾಲೀಕರ ಪರವಾನಗಿಯನ್ನು ಅಮಾನತುಗೊಳಿಸಲು ಸ್ಥಳೀಯ ಪೊಲೀಸರಿಗೆ ಸರಕಾರ ಆದೇಶ ನೀಡಿದೆ.

ಮೊಬೈಲ್‌ ಮತ್ತು ಸ್ಥಿರ ದೂರವಾಣಿ ಬಳಕೆಯಿಂದ ಸಿಕ್ಕಿ ಬೀಳುವ ಅವಕಾಶಗಳಿರುವ ಕಾರಣ, ಅಂತಾರಾಜ್ಯ ಪಾತಕಿಗಳು ಈಗ ಅಂತರ್ಜಾಲದ ದುರುಪಯೋಗಕ್ಕೆ ಮುಂದಾಗಿದ್ದಾರೆ. ನಿಗೂಢ ಸಂಕೇತಾಕ್ಷರಗಳ ಮೂಲಕ ಕ್ರಿಮಿನಲ್‌ ಚಟುವಟಿಕೆಗೆ ಸೈಬರ್‌ ಕೆಫೆಗಳನ್ನು ಬಳಸಲಾಗುತ್ತಿದೆ. ಸೈಬರ್‌ ಅಪರಾಧವನ್ನು ತಡೆಗಟ್ಟಲು ಪ್ರತ್ಯೇಕ ಪೊಲೀಸ್‌ಠಾಣೆ ಆರಂಭಿಸಿರುವ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ, ಹೊಸ ಕಾಯ್ದೆ ಮೂಲಕ ಸೈಬರ್‌ ಅಪರಾಧಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+