ಪಟಾಕಿ ಢಂ ಢಂ- ನಗರದ ಚಿಣ್ಣರಿಬ್ಬರ ಪಾಲಿಗೆ ಬೆಳಕಿಲ್ಲದ ದೀಪಾವಳಿ !
ಪಟಾಕಿ ಢಂ ಢಂ- ನಗರದ ಚಿಣ್ಣರಿಬ್ಬರ ಪಾಲಿಗೆ ಬೆಳಕಿಲ್ಲದ ದೀಪಾವಳಿ !
ಹದಿನೈದಕ್ಕೂ ಅಧಿಕ ಪಟಾಕಿ ಸಿಡಿತದ ದುರಂತಗಳು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ನಗರದ ಪಾದರಾಯಪುರದ ಬಾಲಕಿ(10) ಸುಹಾಬಾ ಬಾನು ಎಂಬಾಕೆಯ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಕಣ್ಣು ಕಾಣದ ಸ್ಥಿತಿ ಬಂದಿದೆ. ಶುಕ್ರವಾರ(ನ. 12) ಬೆಳಿಗ್ಗೆ ಆಕೆ ಐಸ್ ಕ್ರೀಂ ಅಂಗಡಿಗೆ ಹೋಗುತ್ತಿದ್ದಾಗ, ರಸ್ತೆ ಪಕ್ಕದ ಮಕ್ಕಳು ಹಚ್ಚುತ್ತಿದ್ದ ಪಟಾಕಿಗಳು ಸಿಡಿದು ಬಾಲಕಿಯ ಬಲಗಣ್ಣಿಗೆ ತೀವ್ರ ಗಾಯವಾಗಿದೆ.
ಯಲಹಂಕ ಅಗ್ರಹಾರದ ಅಜ್ಜಿಮನೆಯಲ್ಲಿ ಪಟಾಕಿ ಹೊಡೆಯುತ್ತಿದ್ದ ಪ್ರವೀಣ್(13) ಗೆ ಹೂಕುಂಡ ಸಿಡಿದು, ಕಣ್ಣು ಗುಡ್ಡೆ ಹರಿದು ಹೋಗಿದೆ. ಆರ್.ಟಿ.ನಗರದ ಮದರ್ಸ್ ಹೋಮ್‌ನ ಮೂರು ವರ್ಷದ ಮಗು ದೀಪಿಕಾಗೂ ಪಟಾಕಿ ಸಿಡಿತದಿಂದ ಎದೆ ಕೈ ಸೇರಿದಂತೆ ದೇಹದ ಶೇ 18 ರಷ್ಟು ಭಾಗ ಸುಟ್ಟುಹೋಗಿದೆ.
ಉರಿಯುವ ರಾಕೇಟ್‌ಗಳು ತೆಂಗಿನ ಮರ ಹಾಗೂ ಚಪ್ಪರಕ್ಕೆ ತಾಕಿ ಸಣ್ಣಪುಟ್ಟ ಅಗ್ನಿದುರಂತಗಳು ಸಹಾ ಸಂಭವಿಸಿವೆ. ಕಳೆದ ಎರಡು ದಿನದಿಂದ ಪಟಾಕಿಗಳಿಂದ ಗಾಯಕೊಂಡ ಒಟ್ಟು ಏಳು ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾಗಿ ಮಿಂಟೋ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ದೀಪಾವಳಿ ಬೆಳಕಿನ ಹಬ್ಬವೇ ಹೊರತು, ಪಟಾಕಿಗಳ ಹಬ್ಬವಲ್ಲ. ಆದರೆ ಮಕ್ಕಳ ಪಟಾಕಿ ಸುಡುವ ಸಂಭ್ರಮ ದುರಂತಕ್ಕೆ ಕಾರಣವಾಗದಂತೆ ಪೋಷಕರು ಹೆಚ್ಚರವಹಿಸಬೇಕಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications