ಆನ್‌ಲೈನ್‌ಲಾಟರಿಗೆ ಜೀವದಾನ ನೀಡಿ : ಸಿಎಂ ಧರ್ಮಸಿಂಗ್‌ಗೆ ಮೊರೆ
ಆನ್‌ಲೈನ್‌ಲಾಟರಿಗೆ ಜೀವದಾನ ನೀಡಿ : ಸಿಎಂ ಧರ್ಮಸಿಂಗ್‌ಗೆ ಮೊರೆ
ಆನ್‌ಲೈನ್ ಲಾಟರಿ ನಿಲ್ಲಿಸಿದ ಪರಿಣಾಮ ಸರಕಾರದ ಬೊಕ್ಕಸಕ್ಕೆ 100 ಕೋಟಿ ಖೋತಾ
ಆನ್‌ಲೈನ್‌ಲಾಟರಿಯ ನಿಷೇಧದಿಂದ ಒಂದಕ್ಕಿ ಲಾಟರಿ ಸೇರಿದಂತೆ ಅನೇಕ ಅನಧಿಕೃತ ಲಾಟರಿಗಳು ರಾಜ್ಯದಲ್ಲಿ ತಲೆ ಎತ್ತಿವೆ. ಆನ್‌ಲೈನ್ ಲಾಟರಿ ರದ್ಧತಿಯ ಪರಿಣಾಮ ಪ್ರತಿವರ್ಷ 100 ಕೋಟಿ ರು. ಆದಾಯ ಸರಕಾರಕ್ಕೆ ತಪ್ಪಿಹೋಗಿದೆ. ವಿಶ್ವಾಸಾರ್ಹತೆ ಇಲ್ಲದ ಪೇಪರ್ ಲಾಟರಿಗೆ ಮಾನ್ಯತೆ ನೀಡಿರುವ ಸರಕಾರ, ಕೂಡಲೇ ಪಾರದರ್ಶಕವಾಗಿರುವ ಆನ್‌ಲೈನ್‌ಲಾಟರಿಗೆ ಚಾಲನೆ ನೀಡ ಬೇಕು ಎಂದು ಆನ್‌ಲೈನ್‌ಲಾಟರಿ ಮಾರಾಟಗಾರರ ವೇದಿಕೆಯ ದೇವಿದಾಸನ್ ತಿಳಿಸಿದ್ದಾರೆ.
ಆನ್‌ಲೈನ್ ಲಾಟರಿಯದು ಸಣ್ಣ ಮಾರುಕಟ್ಟೆಯಾದರೂ 200 ಕೋಟಿ ವಹಿವಾಟು ನಡೆಸುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಶೇ.90 ರಷ್ಟು ವ್ಯಾಪ್ತಿ ಹೊಂದಿದ್ದರೂ ಪೇಪರ್ ಲಾಟರಿ ಕೇವಲ 20 ಕೋಟಿ ವಹಿವಾಟು ನಡೆಸುತ್ತಿದೆ. ಸರಕಾರ ವಾಸ್ತವ ಸಂಗತಿಗಳನ್ನು ಅರ್ಥ ಮಾಡಿಕೊಂಡು, ಕೂಡಲೇ ಆನ್‌ಲೈನ್ ಮೇಲಿನ ನಿಷೇಧವನ್ನು ತೆಗೆದು ಹಾಕಬೇಕೆಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್‌ಗೆ ಆನ್‌ಲೈನ್ ಲಾಟರಿ ಮಾರಾಟಗಾರರು ಮನವಿ ಸಲ್ಲಿಸಿದ್ದಾರೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications