ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ, ಗುಲ್ಪರ್ಗ, ಹುಬ್ಬಳ್ಳಿ,ಧಾರವಾಡ ನಗರಗಳಲ್ಲಿ 24ಗಂಟೆ ನೀರು

By Staff
|
Google Oneindia Kannada News

ಬೆಳಗಾವಿ, ಗುಲ್ಪರ್ಗ, ಹುಬ್ಬಳ್ಳಿ,ಧಾರವಾಡ ನಗರಗಳಲ್ಲಿ 24ಗಂಟೆ ನೀರು
ಉತ್ತರ ಕರ್ನಾಟಕದ ಕುಡಿಯುವ ನೀರಿನ ಬವಣೆ ನೀಗಿಸಲು 235 ಕೋಟಿ ಯೋಜನೆ

ಬೆಂಗಳೂರು : ಉತ್ತರ ಕರ್ನಾಟಕದ ಕೆಲವು ನಗರಗಳಿಗೆ ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆ ಸದ್ಯದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ. ಈ ಭಾಗದ ತೀವ್ರ ನೀರಿನ ಬವಣೆಗೆ ಯೋಜನೆ ಪೂರ್ಣವಿರಾಮ ಹಾಕುವ ಸಾಧ್ಯತೆಗಳಿವೆ.

2003 ರಲ್ಲಿ ಕರ್ನಾಟಕ ನಗರ ಮೂಲಭೂತ ಸೌಕರ್ಯ ಮತ್ತು ಹಣಕಾಸು ನಿಗಮ(ಕೆಯುಐಡಿಎಫ್‌ಸಿ) ಅಂತರರಾಷ್ಟ್ರೀಯ ನೀರು ನಿರ್ವಹಣಾ ಕಂಪನಿಯ ಸಹಯೋಗದೊಂದಿಗೆ ಈ ಯೋಜನೆ ರೂಪಿಸಿತ್ತು. ಪ್ರಸಕ್ತ ವರ್ಷದಲ್ಲಿ ಟೆಂಡರ್‌ ಕರೆಯುವ ಮೂಲಕ ಯೋಜನೆಯ ಅನುಷ್ಠಾನಕ್ಕೆ ಚಾಲನೆ ಸಿಕ್ಕಿದೆ.

235 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಳಗಾವಿ, ಗುಲ್ಪರ್ಗ, ಹುಬ್ಬಳ್ಳಿ, ಧಾರವಾಡ ನಗರಗಳಿಗೆ ದಿನದ 24 ಗಂಟೆಯೂ ನೀರು ಪೂರೈಕೆ ಮಾಡುವುದು ಯೋಜನೆಯ ಗುರಿ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೀರು ಸರಬರಾಜಿನಲ್ಲಿನ ಅಡಚಣೆ ತಪ್ಪಿಸಿ, ಸೋರಿಕೆ ತಡೆದು ವ್ಯವಸ್ಥಿತವಾಗಿ ನೀರನ್ನು ಬಳಸಿಕೊಳ್ಳುವ ಯೋಜನೆ ರೂಪುಕೊಳ್ಳುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X