ಬಿನ್ ಲ್ಯಾಡೆನ್ ಬಾಂಬ್! ಬಿಹಾರ ಪಾಟ್ನಾ ಮಾರುಕಟ್ಟೆಯಲ್ಲಿ ಬಿಸಿಬಿಸಿ
ಬಿನ್ ಲ್ಯಾಡೆನ್ ಬಾಂಬ್! ಬಿಹಾರ ಪಾಟ್ನಾ ಮಾರುಕಟ್ಟೆಯಲ್ಲಿ ಬಿಸಿಬಿಸಿ
ಮಾರುಕಟ್ಟೆಯಲ್ಲಿ ಲ್ಯಾಡೆನ್ ಜೊತೆ ಬುಷ್ ಹಾಗೂ ಘಾಲಿಬ್
ಬಿನ್ ಲಾಡೆನ್ ಬಾಂಬ್ ಹೆಸರಿನ ಪಟಾಕಿ ಬೇಕೆಂದರೆ ನೀವು ಸೀದಾ ಬಿಹಾರದ ಪಾಟ್ನಾ ಪಟಾಕಿ ಮಳಿಗೆಗಳಿಗೇ ಹೋಗಬೇಕು. ಪಾಟ್ನಾ ಪಟಾಕಿ ಮಾರುಕಟ್ಟೆಯಲ್ಲೀಗ ಬಿಸಿಬಿಸಿಯಾಗಿ ಮಾರಾಟವಾಗುತ್ತಿರುವ ಪಟಾಕಿ ಇದೇನೇ -ಬಿನ್ ಲಾಡೆನ್ ಬಾಂಬ್!
ಎಲ್ಲಿಯ ಲ್ಯಾಡೆನ್ನು, ಎಲ್ಲಿಯ ಪಾಟ್ನಾ , ಎಲ್ಲಿಯ ಪಟಾಕಿ ಎಂದಿರಾ? ಇದು ಮೋಜಿಗಾಗಿ ಪಟಾಕಿ ಸ್ವಾಮಿ! ಪಟಾಕಿ ಸುಡುವ ಮೂಲಕ ಆಲ್‌ಖ್ವೆ ೖದ ಉಗ್ರ ಲ್ಯಾಡೆನ್ನನ್ನೇ ಸುಟ್ಟೆವೆಂದು ಸಂಭ್ರಮಿಸುವ ಆಸೆ ಜನರದು. ಆ ಕಾರಣದಿಂದಲೇ ಲಾಡೆನ್ನು ಪಟಾಕಿಗಳು ಭರದಿಂದ ಮಾರಾಟವಾಗುತ್ತಿವೆ.
ಲ್ಯಾಡೆನ್ ಪಟಾಕಿಯ ಪ್ರತಿ ಪಾಕೆಟ್ಟಿಗೆ 1 ಸಾವಿರ ರುಪಾಯಿ. ಆದರೂ ವ್ಯಾಪಾರ ಭರ್ಜರಿಯಾಗಿದೆ ಎನ್ನುತ್ತಾರೆ ಪಾಟ್ನಾದ ಪಟಾಕಿ ಮಳಿಗೆಯಾಂದರ ಮಾಲಿಕ ಮನೋಹರ್‌ಸಿಂಗ್.
ಅಂದಹಾಗೆ, ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಹಾಗೂ ಉರ್ದು ಕವಿ ಮಿರ್ಜಾ ಘಾಲಿಬ್ ಹೆಸರಿನ ಪಟಾಕಿಗಳೂ ಪಾಟ್ನಾದ ಮಾರುಕಟ್ಟೆಯಲ್ಲಿವೆ. ಲಾಲೂ ಹಾಗೂ ರಾಬಡಿ ಹೆಸರಿನ ಪಟಾಕಿಗಳು ಮಾರುಕಟ್ಟೆ ಪ್ರವೇಶಿಸಿರುವ ಬಗ್ಗೆ ವರದಿಯಾಗಿಲ್ಲ .
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications