‘ಬೀರ್‌ಬಲ್ಲ’ರ ನಗರ ಬೆಂಗಳೂರು !

‘ಬೀರ್‌ಬಲ್ಲ’ರ ನಗರ ಬೆಂಗಳೂರು !
ರಾಜ್ಯದಲ್ಲಿ ಮಾರಾಟವಾಗುವ ಬಿಯರ್‌ನ ಅರ್ಧ ಬೆಂಗಳೂರಿಗೆ ಬೇಕು. ಬೆಂಗಳೂರು ಯುವ ಜನತೆ ಮಂತ್ರವೇನು ಗೊತ್ತಾ- ‘ಪಬ್ಬು ಮೊದಲ ಪಾಠಶಾಲೆ, ಬಿಯರ್‌ ಮೊದಲ ಗುರು!’

  • ಟಿ.ಕೆ. ಪ್ರದೀಪ್‌ ಕುಮಾರ್‌
‘ಬಿಸಿ ಬಿಸಿ ತಂತ್ರಜ್ಞಾನ, ತಂಪು ಪಾನೀಯ. ಜಾಸ್ತಿ ಕೆಲಸ, ಕಮ್ಮಿ ಸಂಬಳ’ ....

ಇತ್ತೀಚೆಗೆ ಬೆಂಗಳೂರನ್ನು ಸಂದರ್ಶಿಸಿದ ವಿದೇಶಿ ಪತ್ರಕರ್ತನೊಬ್ಬ ಇಲ್ಲಿನ ಜನಜೀವನವನ್ನು ಬಣ್ಣಿಸಿದ ರೀತಿ ಇದು.

ಉದ್ಯಾನನಗರಿ, ಪಿಂಚಣಿದಾರರ ಸ್ವರ್ಗ, ಭಾರತದ ಸಿಲಿಕಾನ್‌ ಕಣಿವೆ ಹೀಗೆ ನಾನಾ ಉಪನಾಮಗಳಿಂದ ಬೀಗುತ್ತಿರುವ ಬೆಂಗಳೂರಿಗೆ ಈಗ ‘ಪಬ್‌ ಸಿಟಿ’ ಎಂಬ ಮತ್ತೊಂದು ವಿಶೇಷಣದ ಸೇರ್ಪಡೆಯಾಗಿದೆ. 200ಕ್ಕೂ ಹೆಚ್ಚು ಪಬ್‌ಗಳಿಂದ ‘ಅಲಂಕೃತ ’ವಾಗಿರುವ ನಗರ ದೇಶದ ‘ಪಬ್‌ ರಾಜಧಾನಿ’ ಕೂಡ !

Just grin and beer itಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎರಡು ಲಕ್ಷ ಜನ ‘ಟೆಕ್ಕೀಸ್‌’ ಸೇರಿದಂತೆ ನಾನಾ ಉದ್ಯಮಗಳಲ್ಲಿ ಕೆಲಸ ಮಾಡುವ ಬೆಂಗಳೂರಿನ ಯುವಶಕ್ತಿ ಬೇರೆ ಯಾವುದೇ ಪಾನೀಯಕ್ಕಿಂತ ಬಿಯರ್‌ ಇಷ್ಟ ಪಡುತ್ತಾರೆ. ಕಾಫಿ, ಟೀ, ಕೂಲ್‌ ಡ್ರಿಂಕ್ಸ್‌ಗಳಿಗಿಂತ ಹತ್ತಿರದ ಪಬ್‌ಗೆ ನುಗ್ಗಿ ನೊರೆ ತುಂಬಿದ ಬಿಯರ್‌ ಮಗ್‌ ಮುಂದಿಟ್ಟುಕೊಂಡು ಕೂರುವುದು ನಮ್ಮ ‘ಯುವಶಕ್ತಿ’ಗಳಿಗೆ ತುಂಬ ಇಷ್ಟ , ಆಪ್ಯಾಯಮಾನವಾದ ‘ಪಾಸ್‌ಟೈಮ್‌’ ಕೂಡ.

ಕಳೆದ ಮಾರ್ಚ್‌ ತಿಂಗಳಲ್ಲಿ ಬೇಸಗೆಯ ಸೂರ್ಯ ಸುಡುತ್ತಿದ್ದಾಗ ಈ ನಗರ ಹೀರಿದ ಬಿಯರ್‌ ಪ್ರಮಾಣ 25ಲಕ್ಷ ಲೀಟರ್‌! ಅಂದರೆ ಸುಮಾರು 3,23,000 ಕೇಸ್‌ ಬಿಯರ್‌! ಚಳಿಗಾಲದಲ್ಲಿ ಬಿಯರ್‌ ಬಳಕೆ ಕೊಂಚ ತಗ್ಗುತ್ತದಾದರೂ ಸರಾಸರಿ ತಿಂಗಳೊಂದಕ್ಕೆ 18ಲಕ್ಷ ಬಿಯರ್‌ ಖರ್ಚಾಗುತ್ತದೆ. ಶೇ. 60ರಷ್ಟು ಜನ ಸ್ಟ್ರಾಂಗ್‌ ಬಿಯರ್‌ ಪ್ರಿಯರು. ಉಳಿದವರು ಮೈಲ್ಡ್‌ಗೆ ತೃಪ್ತಿ ಪಡುತ್ತಾರೆ. ರಾಜ್ಯದಲ್ಲಿ ಮಾರಾಟವಾಗುವ ಒಟ್ಟಾರೆ ಬಿಯರ್‌ನ ಅರ್ಧದಷ್ಟು ಬೆಂಗಳೂರಿಗೇ ಬೇಕು ಎನ್ನುತ್ತದೆ ಅಬಕಾರಿ ಇಲಾಖೆ.

ಪಬ್‌ಗಳೆಂಬ ಮಾಯಾಲೋಕ :

ಎಂ.ಜಿ.ರಸ್ತೆ, ರೆಸಿಡೆನ್ಸಿ, ಬ್ರಿಗೇಡ್‌, ಸೇಂಟ್‌ ಮಾರ್ಕ್ಸ್‌ಗಳಲ್ಲಿ ಸ್ಥಾಪಿತವಾಗಿರುವ ಪಬ್‌ಗಳದ್ದೇ ಒಂದು ಮಾಯಾಲೋಕ. ಅವುಗಳಿಗಿಡಲಾಗಿರುವ ಹೆಸರೂ ಅಷ್ಟೇ ಆಕರ್ಷಕ. ನಾಸಾ, ಸ್ಟಿನ್‌, ಥರ್ಟೀನ್ತ್‌ ಫ್ಲೋರ್‌, ಒಪಿಯಂ, ಈಗೋಸ್‌, ಡೌನ್‌ಟೌನ್‌, ದಿ ಬಂಕರ್‌, 180 ಪ್ರೂಫ್‌, ಶರ್ಲಾಕ್‌ ಹೋಮ್ಸ್‌, ನೈಟ್‌ ವಾಚ್‌ಮನ್‌ ಅಂಡರ್‌ ಗ್ರೌಂಡ್‌ ಇತ್ಯಾದಿ.

ಇವೆಲ್ಲ ಅತ್ಯಂತ ಸುಂದರ ಒಳಾಂಗಣದಿಂದ ಸಜ್ಜಿತವಾಗಿವೆ. ‘ನಾಸಾ’ವನ್ನು ವಿಮಾನದ ಒಳಭಾಗದಂತೆ ವಿನ್ಯಾಸಗೊಳಿಸಲಾಗಿದೆ. ಪರಿಚಾರಕರು ವಿಮಾನ ಸಿಬ್ಬಂದಿಯಂತೆ ಡ್ರೆಸ್‌ ಧರಿಸಿರುತ್ತಾರೆ. ‘ನೈಟ್‌ ವಾಚ್‌ಮನ್‌’ ಒಳಭಾಗವನ್ನು ಕ್ರಿಕೆಟ್‌ ಪಿಚ್‌ ಮತ್ತು ಪೆವಿಲಿಯನ್‌ ಮಾದರಿಯಲ್ಲಿ ರಚಿಸಿದ್ದಾರೆ. ಸೈಬರ್‌ಪಬ್‌ನಲ್ಲಿ ಇಂಟರ್ನೆಟ್‌ ನೋಡುತ್ತ ಬಿಯರ್‌ ಕುಡಿವ ಸೌಭಾಗ್ಯ. ಕುಟುಂಬ ಸಮೇತರಾಗಿ ಹೋಗಬೇಕೆಂದರೆ ಪಬ್‌ವರ್ಲ್ಡ್‌ ಉತ್ತಮ. ಎಲ್ಲ ಪಬ್‌ಗಳಲ್ಲೂ ಎದೆಗೆ ಗುದ್ದುವ ಭರಪೂರ ಸಂಗೀತ. ಥಾಮ್‌, ಚೀನಿ, ಇಟೆಲಿ ಇತ್ಯಾದಿ ನಿಮ್ಮ ದೇಹಕ್ಕೆ , ಜೇಬಿಗೆ ಒಗ್ಗುವ ಮೆನು ಲಭ್ಯ.

ಬಿಯರ್‌ ಫಿಯರ್‌ :

ಬಿಯರ್‌ ಪ್ರೇಮಿಗಳ ವಯಸ್ಸು ದಿನೇ ದಿನೇ ಕುಗ್ಗುತ್ತಿರುವುದು ಗಮನಾರ್ಹ. 18 ವರ್ಷಕ್ಕಿಂತ ಕಮ್ಮಿ ಇರುವವರಿಗೆ ಪಬ್‌ ಪ್ರವೇಶ ನಿಷೇಧಿಸಲಾಗಿದೆಯಾದರೂ ವೈನ್‌ ಸ್ಟೋರ್‌ಗಳು ‘ಬಾಲ ಬೀರ್‌ಬಲ್ಲರ’ ದಾಹ ತಣಿಸುತ್ತಿರುವುದು ಕಳವಳಕಾರಿ.

ಅಂದ ಹಾಗೆ, ಬಿಯರ್‌ ಹೀರುವುದರಲ್ಲಿ ನೀರೆಯರೂ ಹಿಂದೆ ಬಿದ್ದಿಲ್ಲ. ಬೆಂಗಳೂರಿನ ಆಲ್ಕೋ ಹಾಲಿಕ್‌ ನೀರೆಯರು ಮೊದಲ ಡ್ರಿಂಕ್‌ ತೆಗೆದುಕೊಂಡಾಗ ಅವರ ಸರಾಸರಿ ವಯಸ್ಸು 16 ವರ್ಷ ಇರುತ್ತದಂತೆ. ಕುಡಿತ ಮೊದಲ ಬಾರಿಗೆ ಬೀರಿನಿಂದಲೇ ಆರಂಭವಾಗುತ್ತದೆ. ನಂತರ ಇತರ ಡ್ರಿಂಕ್‌ಗಳತ್ತ ಹೊರಳುತ್ತದೆ ಎಂಬ ಸಂಗತಿಯನ್ನು ನಿಮ್ಹಾನ್ಸ್‌ ನಡೆಸಿದ ಅಧ್ಯಯನ ಹೊರಗೆಡವಿದೆ. ಇದರಿಂದ ಗೊತ್ತಾದ ಮತ್ತೊಂದು ವಿಚಾರವೆಂದರೆ, ಬಹುತೇಕರಿಗೆ ಕುಡಿತದ ಚಟ ಬೆನ್ನು ಹತ್ತುವುದು ಪಬ್‌ಗಳಲ್ಲೇ. ಆ ಮಟ್ಟಿಗೆ ‘ಪಬ್ಬು ಮೊದಲ ಪಾಠಶಾಲೆ, ಬಿಯರ್‌ ಮೊದಲ ಗುರು!’.

(ಸ್ನೇಹಸೇತು : ವಿಜಯಕರ್ನಾಟಕ)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+