ಝಣ ಝಣ ರುಪಾಯಿ ; ಕಾಮರಾಜ್ ಸ್ಮರಣೆಗಾಗಿ ನೂರು ರು. ನಾಣ್ಯ
ಝಣ ಝಣ ರುಪಾಯಿ ; ಕಾಮರಾಜ್ ಸ್ಮರಣೆಗಾಗಿ ನೂರು ರು. ನಾಣ್ಯ
35ಗ್ರಾಂ ತೂಕದ 100 ರು. ನಾಣ್ಯದಲ್ಲಿ ಶೇ.50ರಷ್ಟು ಬೆಳ್ಳಿ
ಕಾಂಗ್ರೆಸ್ ಮುಖಂಡ ದಿವಂಗತ ಕೆ.ಕಾಮರಾಜ್ ನೆನಪಿಗಾಗಿ 100 ರೂ.ಮತ್ತು 5 ರೂ.ಗಳ ಹೊಸ ನಾಣ್ಯಗಳನ್ನು ಅ.27ರ ಬುಧವಾರದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಗೆ ತಂದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಈ ನಾಣ್ಯಗಳನ್ನು ಸ್ವೀಕರಿಸಿದ ಮೊದಲ ಪ್ರಜೆ.
35 ಗ್ರಾಂ ತೂಕದ 100 ರು. ನಾಣ್ಯ ಶೇ. 50 ರಷ್ಟು ಬೆಳ್ಳಿಯನ್ನು ಒಳಗೊಂಡಿದೆ. ಅಲ್ಲದೇ ಶೇ. 40 ರಷ್ಟು ತಾಮ್ರ ಮತ್ತು ಶೇ. 5 ರಷ್ಟು ನಿಕ್ಕಲ್ ಮತ್ತು ರಿkುಂಕ್ ಲೋಹಗಳನ್ನು ಹೊಂದಿದೆ.
9 ಗ್ರಾಂ ತೂಕದ ಐದು ರು. ನಾಣ್ಯ ಶೇ. 75 ರಷ್ಟು ತಾಮ್ರ ಮತ್ತು ಶೇ. 25 ರಷ್ಟು ನಿಕ್ಕಲ್ ಲೋಹವನ್ನು ಒಳಗೊಂಡಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications