ಬೆಂಗಳೂರಿನ ಪ್ರತಿಭೆ ಅರುಣ್‌ರಿಂದ ಸೂಪರ್‌ಕಂಪ್ಯೂಟರ್ ‘ಥಂಡರ್’
ಬೆಂಗಳೂರಿನ ಪ್ರತಿಭೆ ಅರುಣ್‌ರಿಂದ ಸೂಪರ್‌ಕಂಪ್ಯೂಟರ್ ‘ಥಂಡರ್’
ಲಾರೆನ್ಸ್ ಲಿವರ್‌ಮೋರ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ‘ಥಂಡರ್’
ಅಮೆರಿಕದಲ್ಲಿ ನೆಲೆಸಿರುವ ಅರುಣ್ ಕ್ಯಾಲಿಫೋರ್ನಿಯಾ ಡಿಜಿಟಲ್ ಸಂಸ್ಥೆಯನ್ನು ಆರಂಭಿಸಿ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ ‘ಥಂಡರ್’ ತಯಾರಿಸಿ ದಾಖಲೆ ಸ್ಥಾಪಿಸಿದ್ದಾರೆ.
ವಿಶ್ವದ ಅತ್ಯಂತ ವೇಗದ 10 ಸೂಪರ್ ಕಂಪ್ಯೂಟರ್‌ಗಳಲ್ಲಿ ಥಂಡರ್ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನ ಜಪಾನ್ ದೇಶದ ‘ಅರ್ಥ್ ಸಿಮ್ಯುಲೇಟರ್’ ಕಂಪ್ಯೂಟರ್‌ಗೆ ಲಭಿಸಿದೆ. ಇದರ ಬೆಲೆ 350 ದಶಲಕ್ಷ ಡಾಲರ್. ಥಂಡರ್ ಬೆಲೆ 20 ದಶಲಕ್ಷ ಡಾಲರ್. ಥಂಡರ್ ಈಗ ಲಾರೆನ್ಸ್ ಲಿವರ್‌ಮೋರ್ ರಾಷ್ಟ್ರೀಯ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದೆ.
ಸಾಮಾನ್ಯವಾಗಿ ದೊಡ್ಡ ಕಂಪನಿಗಳು ಸೂಪರ್ ಕಂಪ್ಯೂಟರ್ ತಯಾರಿಸುವ ಸಾಮರ್ಥ್ಯ ಪಡೆದಿರುತ್ತದೆ. ಸಣ್ಣ ಕಂಪನಿಯಾಂದು ಇದನ್ನು ತಯಾರಿಸಿರುವುದರೊಂದಿಗೆ ಐಟಿ ರಂಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.
ಬೆಂಗಳೂರು ಮೂಲದದ ಅರುಣ್ ಬಿಷಪ್ ಶಾಲೆಯ ವಿದ್ಯಾರ್ಥಿ. ಒಕ್ಕಲಿಗರ ಸಂಘಕ್ಕೆ ಸೇರಿದ ಎಂಜನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಬಿ.ಇ. ಪದವಿಗಳಿಸಿ ಅಮೆರಿಕಕ್ಕೆ ಹೋದವರು. 1994 ರಲ್ಲಿ ತಮ್ಮ ಮನೆಯ ಗ್ಯಾರೇಜ್‌ನಲ್ಲಿ ಪತ್ನಿ ಗಾಯತ್ರಿ ಸಹಕಾರದೊಂದಿಗೆ ಹೊಸ ಕಂಪನಿಯನ್ನು ಆರಂಭಿಸಿದರು. ಈಗಲೂ ಇದು ಸಣ್ಣ ಕಂಪನಿ. 100 ಜನರು ಮಾತ್ರ ಕೆಲಸ ಮಾಡುತ್ತಾರೆ.
ಈ ಸಂಸ್ಥೆಯ ಮತ್ತೊಬ್ಬ ಮುಖ್ಯಸ್ಥ ಶ್ರೀನಿಧಿ ವರದರಾಜನ್ ‘ದೇಜ ವಿಯು’ ಹೊಸ ಸಾಫ್ಟ್‌ವೇರ್ ತಯಾರಿಸಿ ಹೆಸರು ಗಳಿಸಿದ್ದಾರೆ. ಜಪಾನಿನ ಅರ್ಥ್ ಸಿಮ್ಯುಲೇಟರ್ 35.86 ಟೆರಾಫ್ಲಾಸ್ ಸಾಮರ್ಥ್ಯ ಪಡೆದಿದ್ದರೆ, ಥಂಡರ್ 19.94 ಟೆರಾಫ್ಲಾಸ್ ವೇಗ ಪಡೆದಿದೆ.
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ಐಟಿ - ಬಿಟಿ












Click it and Unblock the Notifications