ಅ.29 ರಿಂದ ಬೆಂಗಳೂರಿನಲ್ಲಿ ಇಂಡೊ-ಜರ್ಮನ್ ಚಲನಚಿತ್ರೋತ್ಸವ
ಅ.29 ರಿಂದ ಬೆಂಗಳೂರಿನಲ್ಲಿ ಇಂಡೊ-ಜರ್ಮನ್ ಚಲನಚಿತ್ರೋತ್ಸವ
ಚಿತ್ರಪ್ರದರ್ಶನ, ಕಮ್ಮಟ, ಚರ್ಚೆ, ಇಂಡೊ-ಜರ್ಮನ್ ಭಾಯಿಭಾಯಿ
ಮ್ಯಾಕ್ಸ್ ಮುಲ್ಲರ್‌ಭವನವು ಎರಡನೆಯ ಇಂಡೋ-ಜರ್ಮನ್ ಚಲನಚಿತ್ರೋತ್ಸವವನ್ನು ಆಯೋಜಿಸಿದೆ. ಭಾರತ ಮತ್ತು ಜರ್ಮನಿಯ ತಲಾ ಹತ್ತು ಚಿತ್ರಗಳು ಚಿತ್ರರಸಿಕರಿಗೆ ಮುದನೀಡಲಿವೆ. ಪ್ರತಿದಿನವೂ ಚಿತ್ರಸುಗ್ಗಿ . ಆಸಕ್ತ ಚಿತ್ರಪ್ರೇಮಿಗಳು ತಮ್ಮ ಪ್ರವೇಶ ಪತ್ರಗಳನ್ನು ಅಕ್ಟೋಬರ್ 25 ರಿಂದ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮ್ಯಾಕ್ಸ್ ಮುಲ್ಲರ್ ಭವನದಿಂದ ಪಡೆದುಕೊಳ್ಳಬಹುದೆಂದು ಚಿತ್ರೋತ್ಸವದ ಆಯೋಜಕರು ತಿಳಿಸಿದ್ದಾರೆ.
ಕಮ್ಮಟ : ಚಿತ್ರೋತ್ಸವ ಅಂಗವಾಗಿ ಡಿಜಿಟಲ್ ಚಿತ್ರಗಳ ಕುರಿತ ಬಾದಾಮಿ ಹೌಸ್‌ನಲ್ಲಿ ಎರಡು ದಿನಗಳ ಕಮ್ಮಟವೊಂದನ್ನು ಏರ್ಪಡಿಸಲಾಗಿದೆ.
ಜಾಗತೀಕರಣದ ದಿನಗಳಲ್ಲಿ ಜರ್ಮನ್ ಮತ್ತು ಭಾರತೀಯ ದೃಷ್ಟಿಕೋನ, ಸಿನಿಮಾ ನಿರ್ಮಾಣ, ಮಾರುಕಟ್ಟೆ , ಇಂಡೋ-ಜರ್ಮನ್ ಸಹ ನಿರ್ಮಾಣ, ಜರ್ಮನಿಯ ಶೂಟಿಂಗ್‌ತಾಣಗಳು - ಹೀಗೆ ವಿವಿಧ ವಿಚಾರಗಳನ್ನು ಚರ್ಚಿಸುವ ದುಂಡು ಮೇಜಿನ ಮಾತುಗೋಷ್ಠಿಯನ್ನು ಚಿತ್ರೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications