ವೀರಪ್ಪನ್ ಮಗಳಿಗೆ ಶಾಲೆಯಿಂದ ಗೇಟ್‌ಪಾಸ್ ನೀಡಿಲ್ಲ -ಶಾಲೆ ಸ್ಪಷ್ಟನೆ
ವೀರಪ್ಪನ್ ಮಗಳಿಗೆ ಶಾಲೆಯಿಂದ ಗೇಟ್‌ಪಾಸ್ ನೀಡಿಲ್ಲ -ಶಾಲೆ ಸ್ಪಷ್ಟನೆ
ಅಪ್ಪನ ಪಾಪಕ್ಕೆ ಮಗಳಿಗೆ ಶಿಕ್ಷೆ ನೀಡುವುದಿಲ್ಲ...
ಗುರುವಾರ(ಅಕ್ಟೋಬರ್21) ಸುದ್ದಿಗಾರರೊಂದಿಗೆ ಮಾತನಾಡಿದ ಅವರು- ಹನ್ನೆರಡು ವರ್ಷದ ಪ್ರಭಾ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಮ್ಮ ಅನುಮತಿ ಪಡೆದು ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ತೆರಳಿದ್ದಾಳೆ. ಆಕೆಯ ವಿದ್ಯಾಭ್ಯಾಸಕ್ಕೆ ಶಾಲೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲಿದೆ ಎಂದರು.
ವೀರಪ್ಪನ್ ಕೃತ್ಯಗಳಿಗೂ ಆಕೆಯ ಮಗಳಿಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಶಾಲೆಯ ಆಡಳಿತ ಮಂಡಳಿ ಅರಿತಿದೆ. ಹೀಗಾಗಿ ಪ್ರಭಾ ಮೇಲೆ ಯಾವುದೇ ಕ್ರಮವನ್ನು ಜರುಗಿಸುವುದಿಲ್ಲ. ಹಾಸ್ಟೆಲ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಬಹುದಾದ ಸೌಕರ್ಯಗಳನ್ನು ಪ್ರಭಾಳಿಗೆ ನೀಡಲು ಆಡಳಿತ ಮಂಡಳಿ ಸಿದ್ಧವಿದೆ ಎಂದರು.
ಪ್ರಭಾ ವೀರಪ್ಪನ್‌ನ ಎರಡನೇ ಮಗಳು. 2002 ರಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಹಾಗೂ ಚೆನ್ನೈನ ವಕೀಲರೊಬ್ಬರು ಪ್ರಭಾಳನ್ನು ಶಾಲೆಗೆ ಸೇರಿಸಿದ್ದರು. ವೀರಪ್ಪನ್ ಸಾವಿನ ಸುದ್ದಿ ತಿಳಿದ ತಕ್ಷಣ ಶಾಲಾಡಳಿತ ಪ್ರಭಾಳಿಗೆ ಟಿ.ಸಿ.ನೀಡಲು ಮುಂದಾಗಿದೆ ಎಂದು ಚೆನ್ನೈ ಮೂಲದ ವಕೀಲರು ಬುಧವಾರ ದೂರಿದ್ದರು.
(ಪಿಟಿಐ)
ಮುಖಪುಟ / ವೀರಪ್ಪನ್












Click it and Unblock the Notifications