ಮಾಹಿತಿ ತಂತ್ರಜ್ಞಾನದ ಪ್ರಗತಿಗೆ ನ್ಯೂಜಿಲ್ಯಾಂಡ್‌ ಪ್ರಧಾನಿಯ ಮೆಚ್ಚುಗೆ

ಮಾಹಿತಿ ತಂತ್ರಜ್ಞಾನದ ಪ್ರಗತಿಗೆ ನ್ಯೂಜಿಲ್ಯಾಂಡ್‌ ಪ್ರಧಾನಿಯ ಮೆಚ್ಚುಗೆ
ಹೆಲೆನ್‌ ಕ್ಲಾರ್ಕ್‌ರಿಂದ ಬೆಂಗಳೂರಿನ ಐಟಿ-ಬಿಟಿ ಕಾರ್ಯಕ್ಷೇತ್ರದ ವೀಕ್ಷಣೆ

ಬೆಂಗಳೂರು: ಭಾರತ ಪ್ರವಾಸದಲ್ಲಿರುವ ನ್ಯೂಜಿಲ್ಯಾಂಡ್‌ ಪ್ರಧಾನಿ ಹೆಲೆನ್‌ ಕ್ಲಾರ್ಕ್‌, ಮಾಹಿತಿ ತಂತ್ರಜ್ಞಾನದ ದೈತ್ಯರೆಂದೇ ಗುರ್ತಿಸಲಾಗುವ ಸಾಪ್ಟ್‌ವೇರ್‌ ವಿಭಾಗದ ಇನ್‌ಪೋಸಿಸ್‌ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬಯೋಕಾನ್‌ ಮುಖ್ಯಸ್ಥರನ್ನು ಸೋಮವಾರ(ಅಕ್ಟೋಬರ್‌ 18) ಭೇಟಿ ಮಾಡಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯ ಹಾಗೂ ವಿಕಾಸದ ಬಗೆಗೆ ವಿವಿಧ ಕಂಪನಿಗಳೊಂದಿಗೆ ಕ್ಲಾರ್ಕ್‌, ಚರ್ಚೆ ನಡೆಸಿ ಭಾರತದ ಪ್ರಗತಿಯನ್ನು ಶ್ಲಾಘಿಸಿದರು. ಭಾರತದ ಶ್ರೀಮಂತ ಮಹಿಳೆ ಹಾಗೂ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಮದಾರ್‌ ಶಾರೊಂದಿಗೆ, ಭಾರತದ ದೊಡ್ಡ ಬಯೋಟೆಕ್‌ ಫಾರ್ಮನ್ನು ವೀಕ್ಷಿಸಿದರು.

ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಿನ ವಾಣಿಜ್ಯ ಸಂಬಂಧಗಳ ರೂಪುರೇಷೆಗಳ ಬಗೆಗೆ ಚರ್ಚಿಸಿದರು. ಎರಡು ದಶಕಗಳ ನಂತರ ಭಾರತಕ್ಕೆ ಆಗಮಿಸಿರುವ ನ್ಯೂಜಿಲ್ಯಾಂಡ್‌ ಪ್ರಧಾನಿ ಕ್ಲಾರ್ಕ್‌, ಭಾರತದಲ್ಲಿ ಎರಡು ದಿನಗಳ ಕಾಲ ಮಾಹಿತಿ ತಂತ್ರಜ್ಞಾನದ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದಾರೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+