ವಿಪ್ರೋ ವಿಕ್ಟರಿ: ಎರಡನೇ ತ್ರೆೃಮಾಸಿಕದಲ್ಲಿ ಶೇ.79ರಷ್ಟು ದಾಖಲೆ ಲಾಭ
ವಿಪ್ರೋ ವಿಕ್ಟರಿ: ಎರಡನೇ ತ್ರೆೃಮಾಸಿಕದಲ್ಲಿ ಶೇ.79ರಷ್ಟು ದಾಖಲೆ ಲಾಭ
1978.50 ಕೋಟಿ ರುಪಾಯಿ ಆದಾಯ ಗಳಿಕೆ
2004ರ ಸೆಪ್ಟಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೆೃಮಾಸಿಕದ ಲೆಕ್ಕಪತ್ರಗನ್ನು ವಿಪ್ರೋ ಶುಕ್ರವಾರ ಪ್ರಕಟಿಸಿತು. ಈ ತ್ರೆೃಮಾಸಿಕದಲ್ಲಿ 1978.50 ಕೋಟಿ ರುಪಾಯಿ ಆದಾಯ ಗಳಿಸಿರುವ ವಿಪ್ರೋ- ಒಟ್ಟು 411.70 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವಿತ್ತವರ್ಷದ ಇದೇ ತ್ರೆೃಮಾಸಿಕದಲ್ಲಿ 266.70 ಕೋಟಿ ರುಪಾಯಿ ಲಾಭ ಹಾಗೂ 1373.50 ಕೋಟಿ ರುಪಾಯಿ ಆದಾಯವನ್ನು ವಿಪ್ರೋ ದಾಖಲಿಸಿತ್ತು .
ಈ ಫಲಿತಾಂಶಗಳು ಮಾರುಕಟ್ಟೆಯಲ್ಲಿ ವಿಪ್ರೋದ ಪ್ರಾಬಲ್ಯಕ್ಕೆ ಕನ್ನಡಿಯಾಗಿವೆ. ಗ್ರಾಹಕರು ಉತ್ತಮ ಗುಣಮಟ್ಟವನ್ನು ಪುರಸ್ಕರಿಸುವುದು ಮತ್ತೊಮ್ಮೆ ರುಜುವಾತಾಗಿದೆ ಎಂದು ಕಂಪನಿಯ ಸಾಧನೆಯ ಬಗ್ಗೆ ವಿಪ್ರೋತ್ತಮ ಅಜೀಂ ಪ್ರೇಂಜಿ ಸಂತಸ ವ್ಯಕ್ತಪಡಿಸಿದ್ದಾರೆ.
ಎರಡನೇ ತ್ರೆೃಮಾಸಿಕದಲ್ಲಿ ವಿಪ್ರೋ ಬಳಗಕ್ಕೆ ಹೊಸದಾಗಿ 5,546 ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ವಿಪ್ರೋ ಬಳಗದ ಸಂಖ್ಯೆ 37,063ಕ್ಕೇರಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications