ಮುರಳಿ ಮರಳಿ ಹಿಂದಕ್ಕೆ! ವಾರ್ನ್ ಅತ್ಯಧಿಕ ಟೆಸ್ಟ್ ವಿಕೆಟ್ ವಿಶ್ವ ದಾಖಲೆ
ಮುರಳಿ ಮರಳಿ ಹಿಂದಕ್ಕೆ! ವಾರ್ನ್ ಅತ್ಯಧಿಕ ಟೆಸ್ಟ್ ವಿಕೆಟ್ ವಿಶ್ವ ದಾಖಲೆ
ವಾರ್ನ್‌ಗೆ 533ನೇ ದಾಖಲೆ ಬಲಿಯಾದ ಪಠಾಣ್
ಮೊದಲ ದಿನದ ಆಟದ ಅಂತ್ಯದಲ್ಲಿ ರಾತ್ರಿ ಕಾವಲುಗಾರನಾಗಿ ಕ್ರೀಸ್‌ಗಿಳಿದಿದ್ದ ಪಠಾಣ್ ಶುಕ್ರವಾರ ಬೆಳಗ್ಗೆ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡರು. ಕೊನೆಗೆ ಮೋಡಿ ಎಸೆತವೊಂದಕ್ಕೆ ಬಲಿಯಾದ ಪಠಾಣ್, ವಾರ್ನ್‌ಗೆ ವಿಶ್ವದಾಖಲೆಯ ವಿಕೆಟ್ ರೂಪದಲ್ಲಿ ಪರಿಣಮಿಸಿದರು.
ಪಠಾಣ್ ವಿಕೆಟ್ ಮೂಲಕ ಮುರಳೀಧರನ್‌ರ 532 ವಿಕೆಟ್‌ಗಳ ಸಾಧನೆಯನ್ನು ವಾರ್ನ್ ಹಿಂದಿಕ್ಕಿದರು. ತಮ್ಮ 114ನೇ ಪಂದ್ಯದಲ್ಲಿ ವಾರ್ನ್ ಈ ಸಾಧನೆ ಮಾಡಿದ್ದಾರೆ.
ಬೆಂಗಳೂರು ಟೆಸ್ಟ್‌ನಲ್ಲಿ ಮುರಳೀಧರನ್‌ರ ವಿಶ್ವದಾಖಲೆ ಹಿಂದಿಕ್ಕುವುದಕ್ಕೆ ಹರ ಸಾಹಸ ಮಾಡಿದ್ದ ವಾರ್ನ್ ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications