ದಸರಾ ಕಾಣಿಕೆ: ಕೆಎಸ್‌ಆರ್‌ಟಿಸಿ,ಬಿಎಂಟಿಸಿ ಪ್ರಯಾಣ ದರದಲ್ಲಿ ಹೆಚ್ಚಳ
ದಸರಾ ಕಾಣಿಕೆ: ಕೆಎಸ್‌ಆರ್‌ಟಿಸಿ,ಬಿಎಂಟಿಸಿ ಪ್ರಯಾಣ ದರದಲ್ಲಿ ಹೆಚ್ಚಳ
ಪ್ರಯಾಣ ದರ ಹೆಚ್ಚಳದಿಂದ ಕೆಎಸ್‌ಆರ್‌ಟಿಸಿಗೆ 67.29 ಕೋಟಿ ಆದಾಯ
ಕಳೆದ ವರ್ಷಕ್ಕೂ ಈ ವರ್ಷಕ್ಕೂ ಡಿಸೇಲ್ ದರ 5.55 ಪೈಸೆ ಏರಿದೆ. ನೌಕರರ ತುಟ್ಟಿ ಭತ್ಯೆ ಶೇ.9 ರಷ್ಟು ಹೆಚ್ಚಳವಾಗಿದೆ. ಹೀಗಾಗಿ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ. ಪ್ರಯಾಣ ದರ ಹೆಚ್ಚಳದಿಂದ 67.29 ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗುವ ಗುರಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಹೊಂದಿದೆ.
ಇದೇ ಕಾರಣವನ್ನು ದರ ಹೆಚ್ಚಳಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಾ ಹೇಳಿದೆ. ಸಂಸ್ಥೆಯ ಬೆಳವಣಿಗೆ ಹೆಚ್ಚಿಸಿಕೊಳ್ಳಲು ಹಾಗೂ ಉತ್ತಮ ಗುಣಮಟ್ಟದ ಬಸ್‌ಗಳು ಹಾಗೂ ಸೇವೆಯನ್ನು ಕಾಯ್ದುಕೊಳ್ಳಲು ಪ್ರಯಾಣ ದರ ಏರಿಕೆಗೆ ಮುಂದಾಗಿರುವುದಾಗಿ ಬಿಎಂಟಿಸಿ ತಿಳಿಸಿದೆ.
ಈ ಬೆನ್ನಲ್ಲಿಯೇ ಶನಿವಾರದಿಂದ ಪೆಟ್ರೋಲ್ ದರ ಲೀಟರ್‌ಗೆ 65 ಪೈಸೆ ಮತ್ತು ಡಿಸೇಲ್ ಬೆಲೆ 1.60 ಪೈಸೆ ಹೆಚ್ಚಳವಾಗುವ ಸಾಧ್ಯತೆಗಳಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications