2ನೇ ತ್ರೆೃಮಾಸಿಕ ಲೆಕ್ಕಪತ್ರ: ಇನ್ಫೋಸಿಸ್‌ಗೆ 447.37 ಕೋಟಿ ರು. ಲಾಭ
2ನೇ ತ್ರೆೃಮಾಸಿಕ ಲೆಕ್ಕಪತ್ರ: ಇನ್ಫೋಸಿಸ್‌ಗೆ 447.37 ಕೋಟಿ ರು. ಲಾಭ
ಮಾರುಕಟ್ಟೆ ನಿರೀಕ್ಷೆಗಳ ದಾಟಿ ನಡೆದ ಇನ್ಫೋಸಿಸ್....
ಕಳೆದ ವಿತ್ತವರ್ಷದ 2ನೇ ತ್ರೆೃಮಾಸಿಕದಲ್ಲಿ 300.98ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದ ಇನ್ಫೋಸಿಸ್, ಈ ಬಾರಿ 447.37ಕೋಟಿ ರು. ಲಾಭ ಗಳಿಸುವ ಮೂಲಕ ಶೇ.48.64ರ ಹೆಚ್ಚಳ ಸಾಧಿಸಿದೆ. ಅಕ್ಟೋಬರ್ 12ರ ಮಂಗಳವಾರ ಎರಡನೇ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಇನ್ಫೋಸಿಸ್ ಬಿಡುಗಡೆ ಮಾಡಿತು.
ಸೆ.30ಕ್ಕೆ ಕೊನೆಗೊಂಡ ತ್ರೆೃಮಾಸಿಕದ ಮುಖ್ಯಾಂಶಗಳು ಇಂತಿವೆ :
- ಒಟ್ಟು 1,749.33 ಕೋಟಿ ರುಪಾಯಿ ಆದಾಯ ಗಳಿಕೆ. ಕಳೆದ ವರ್ಷದ ಇದೇ ತ್ರೆೃಮಾಸಿಕದಲ್ಲಿ ಆದಾಯ ಗಳಿಕೆ 1151.80 ಕೋಟಿ ರುಪಾಯಿ. ಹೆಚ್ಚಳದ ಪ್ರಮಾಣ ಶೇ.51.88.
- ಇನ್ಫೋಸಿಸ್‌ನ ಜಾಗತಿಕ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ. ಆ ಕಾರಣದಿಂದಾಗಿ ಮಾರುಕಟ್ಟೆ ನಿರೀಕ್ಷೆಗಳಿಗಿಂತ ಗುರಿ ಮೀರಿದ ಸಾಧನೆ.
- ಪ್ರತಿ ಷೇರಿಗೆ ಶೇ.100ರ ಮಧ್ಯಂತರ ಡಿವಿಡೆಂಡ್.
- ಎರಡನೇ ತ್ರೆೃಮಾಸಿಕದಲ್ಲಿ 5,010 ನೂತನ ಉದ್ಯೋಗಿಗಳು ಇನ್ಫೋಸಿಸ್ ಬಳಗಕ್ಕೆ ಸೇರ್ಪಡೆ.
- ಇನ್ಫೋಸಿಸ್ ಬಳಗದ ಒಟ್ಟು ಸಂಖ್ಯೆ 32,949ಕ್ಕೆ ಏರಿಕೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications