ದರ ಸಮರ : ಏರ್ ಡೆಕ್ಕನ್ ಪ್ರಯಾಣ ದರದಲ್ಲಿ ಶೇ.20 ರಷ್ಟು ಕಡಿತ
ದರ ಸಮರ : ಏರ್ ಡೆಕ್ಕನ್ ಪ್ರಯಾಣ ದರದಲ್ಲಿ ಶೇ.20 ರಷ್ಟು ಕಡಿತ
ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ಹಾರಲು 5200 ರೂ. ಸಾಕು!
ಜೆಟ್ ಏರ್‌ವೇಸ್ ಮತ್ತು ಸಹರಾ ಏರ್‌ವೇಸ್ ಸಂಸ್ಥೆಗಳು ಇಂಧನದ ಬೆಲೆ ಹೆಚ್ಚಳದ ನೆಪವೊಡ್ಡಿ, ಪ್ರಯಾಣ ದರವನ್ನು ಶೇ. 10 ರಷ್ಟು ಹೆಚ್ಚಿಸಿದ್ದವು. ಆದರೆ ತನ್ನ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಏರ್‌ಡೆಕ್ಕನ್ ಪ್ರಯಾಣ ದರವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಏರ್‌ಡೆಕ್ಕನ್‌ನ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಪ್ರಕಾರ- ಪ್ರಯಾಣ ದರದ ಇಳಿಕೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಅಲ್ಲದೇ ಬೇರೆ ಏರ್‌ಲೈನ್ಸ್‌ಗೆ ಹೋಲಿಸಿದರೆ, ಏರ್‌ಡೆಕ್ಕನ್‌ನ ಪ್ರಯಾಣ ದರ ಮೊದಲಿನಿಂದಲೂ ಶೇ.55 ರಷ್ಟು ಕಡಿಮೆಯಿತ್ತು. ಗ್ರಾಹಕರಿಗೆ ವಾಯುಯಾನ ಅಗ್ಗದ ಸಾಧನವಾಗಿದ್ದು, ಏರ್ ಡೆಕ್ಕನ್ ಬೆಳವಣಿಗೆಗೆ ಪೂರಕವಾಗಲಿದೆ.
ಏರ್‌ಡೆಕ್ಕನ್ ದರ ಕಡಿತದ ಪರಿಣಾಮ ಹೀಗಿದೆ: ಬೆಂಗಳೂರು-ದೆಹಲಿಗೆ ರೂ. 5,200(ಹಳೆಯ ದರ ರೂ. 6,600), ಬೆಂಗಳೂರು-ಮುಂಬೈಗೆ ರೂ.3,400(ಹಳೆಯ ದರ ರೂ.4,400), ಮುಂಬೈ-ದೆಹಲಿಗೆ ರೂ. 3,400(ರೂ.4,400), ದೆಹಲಿ-ಹೈದರಾಬಾದ್ ರೂ.4,000(ರೂ.5,700), ದೆಹಲಿ-ಚೆನ್ನೈ ರೂ.4,500(ರೂ.6,600), ದೆಹಲಿ-ಗೌಹಾತಿ ರೂ.4,200(ರೂ.5,600)
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications