ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಾಗಿ ಕಾಡಿತು ಸಾಕುನಾಯಿ! 5 ತಿಂಗಳ ಹಸುಳೆ ನಾಯಿ ಕಡಿತಕ್ಕೆ ಬಲಿ!

By Staff
|
Google Oneindia Kannada News

ಸಾವಾಗಿ ಕಾಡಿತು ಸಾಕುನಾಯಿ! 5 ತಿಂಗಳ ಹಸುಳೆ ನಾಯಿ ಕಡಿತಕ್ಕೆ ಬಲಿ!
ಕುಟುಂಬದ ನಾಯಿ ದಾಳಿಗೆ ಫ್ಲಾರಿಡಾದ 5 ತಿಂಗಳ ಕೂಸು ಜೋಸ್‌ ಡಯಾಜ್‌ ಸಾವು

ಜಾಕ್ಸನ್‌ವಿಲ್ಲೆ (ಫ್ಲಾರಿಡಾ) : ನಿಷ್ಠೆಗೆ ಮತ್ತೊಂದು ಹೆಸರು ನಾಯಿ. ಆದರೂ ಸಾಕಿದ ನಾಯಿ ಕೆಲವೊಮ್ಮೆ ಒಡೆಯನನ್ನು ಕಚ್ಚುವುದುಂಟು. ಇಲ್ಲಿ ನಾಯಿ ಕಚ್ಚಿದ್ದು ಒಡೆಯನನ್ನಲ್ಲ ; ಹಸುಗೂಸನ್ನು! ಮನೆಯ ಸಾಕು ನಾಯಿಯ ದಾಳಿಯಿಂದ ಜೀವ ಕಳಕೊಂಡ ಐದು ತಿಂಗಳ ಹಸುಕಂದಮ್ಮನ ಹೃದಯ ವಿದ್ರಾವಕ ದುರಂತವಿದು.

ಜೋಸ್‌ ಡಯಾಜ್‌ ಎನ್ನುವ ಕಂದಮ್ಮ ಅಜ್ಜಿ ಮನೆಯಲ್ಲಿ ಹಾಯಾಗಿ ಹಾಸಿಗೆಯ ಮೇಲೆ ಮಲಗಿದ್ದಾಗ ಮನೆಯ ಸಾಕುನಾಯಿ ಏಕಾಏಕಿ ಮಗುವಿನ ಮೇಲೆ ನೆಗೆದು ಹಲ್ಲೆ ಮಾಡಿದೆ. ಮಗುವಿನ ಮುಖ ಹಾಗೂ ತಲೆಯನ್ನು ನಾಯಿ ಮಾರಣಾಂತಿಕವಾಗಿ ಕಚ್ಚಿದೆ. ಮಗುವನ್ನು ಪೋಷಕರು ಅಗ್ನಿಶಾಮಕ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಲಿಕಾಫ್ಟರ್‌ನಲ್ಲಿ ಜಾಕ್ಸನ್‌ವಿಲ್ಲೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದರೂ ಮಗು ಬದುಕಲಿಲ್ಲ. ಈ ಘಟನೆ ನಡೆದಿರುವುದು ಅ.5 ರ ಮಂಗಳವಾರ. ಕೆಲವು ವರ್ಷಗಳ ಹಿಂದೆ ಇಂಥದೇ ಒಂದು ಘಟನೆ ಕರ್ನಾಟಕದ ಚಿತ್ರದುರ್ಗ ದಲ್ಲಿ ಸಂಭವಿಸಿತ್ತು. ಆದರೆ, ನಾಯಿ ಹಲ್ಲೆ ಮಾಡಿ ಕೊಂದ ಹಸುಳೆ ಆಸ್ಪತ್ರೆಯ ಹಾಸಿಗೆಯಲ್ಲಿತ್ತು.

ಟಾಕೋಬೆಲ್‌ನಲ್ಲಿ ಕೆಲಸ ಮಾಡುವ ಜೆನ್ನಿಫರ್‌ವುಡ್‌ಜಿನ್‌ಸ್ಕಿ(19) ಹಾಗೂ ಯಾರ್ಡ್‌ನಲ್ಲಿ ಕೆಲಸ ಮಾಡುವ ಆಲ್ಪರ್ಟ್‌ ಡಯಾಜ್‌(19) ಮಗುವನ್ನು ಕಳೆದುಕೊಂಡಿರುವ ನತದೃಷ್ಟ ದಂಪತಿಗಳು. ಮಗುವನ್ನು ಕಚ್ಚಿ ಕೊಂದಿರುವ ನಾಯಿ ಜೆನ್ನಿಫರ್‌ ವುಡ್‌ಜಿನ್‌ಸ್ಕಿಯದು. ಆಕೆ ಅದನ್ನು ತನ್ನ ತಾಯಿ ಸನ್‌ವುಡ್‌ಜಿನ್‌ಸ್ಕಿ(49) ಮನೆಯಲ್ಲಿ ತನ್ನ ಮಗುವಿನೊಂದಿಗೆ ಬಿಟ್ಟಿದ್ದಳು.

ದುರಂತ ನಡೆದಿರುವ ಮನೆಯಲ್ಲಿ ಕೊಲೆಗಡುಕ ನಾಯಿಯಲ್ಲದೆ ಮತ್ತೆರಡು ನಾಯಿಗಳಿವೆ. ಘಟನೆಯಲ್ಲಿ ಅವುಗಳ ಪಾತ್ರವೇನೂ ಇಲ್ಲ . ಈ ಘಟನೆ ನಂತರ ನಾಯಿಪಾಡು ಏನಾಯಿತು ಎನ್ನುವುದು ವರದಿಯಾಗಿಲ್ಲ . ಕೊಲೆಗಡುಕ ನಾಯಿಗಳಿಗೆ ಅಮೆರಿಕಾ ಅಪ್ಲೈ ಮಾಡುವ ಕಾನೂನುಗಳು ಯಾವುವು?

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X