ನೊಬೆಲ್ ಶಾಂತಿಪ್ರಶಸ್ತಿ : ಅಂತಿಮ ಸುತ್ತಲ್ಲಿ ವಾಜಪೇಯಿ, ಮುಷರ್ರಫ್
ನೊಬೆಲ್ ಶಾಂತಿಪ್ರಶಸ್ತಿ : ಅಂತಿಮ ಸುತ್ತಲ್ಲಿ ವಾಜಪೇಯಿ, ಮುಷರ್ರಫ್
ಅ.7ರ ಗುರುವಾರ ಪ್ರಶಸ್ತಿ ಪ್ರಕಟ
ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆಯ ಅಂತಿಮಪಟ್ಟಿಯಲ್ಲಿ 194 ಹೆಸರುಗಳಿದ್ದು , ಪ್ರಶಸ್ತಿ ಪಡೆದವರ ಹೆಸರನ್ನು ಅ.7ರ ಗುರುವಾರ ಪ್ರಕಟಿಸಲಾಗುವುದು. ಈ ಪಟ್ಟಿಯಲ್ಲಿ ಯುರೋಪಿಯನ್ ಒಕ್ಕೂಟ ಸೇರಿದಂತೆ 50 ಸಂಸ್ಥೆಗಳ ಹೆಸರೂ ಇದೆ ಎಂದು ಅ.6ರ ಬುಧವಾರದ ಸಂಚಿಕೆಯಲ್ಲಿ ದಿ ನೇಷನ್ ಪತ್ರಿಕೆ ಪ್ರಕಟಿಸಿದೆ.
ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಫ್ರೆಂಚ್ ಅಧ್ಯಕ್ಷ ಜೇಕ್ವಸ್ ಚಿರಾಕ್, ಬ್ರಿಟೀಷ್ ಪ್ರಧಾನಿ ಟೋನಿ ಬ್ಲೇರ್ ಹಾಗೂ ಝೆಕ್ ಗಣರಾಜ್ಯದ ಮಾಜಿ ಮುಖ್ಯಸ್ಥ ಪೋಪ್ ವಾಕ್ಲವ್ ಹಾವೆಲ್ ಪ್ರಶಸ್ತಿ ಪಟ್ಟಿಯಲ್ಲಿರುವ ಇತರ ಪ್ರಮುಖ ಹೆಸರುಗಳು.
ಒಂದುವೇಳೆ, ಮುಷರ್ರಫ್ ಅವರಿಗೇನಾದರೂ ಪ್ರಶಸ್ತಿ ಒಲಿದರೆ, ಮಿಲಿಟರಿಗೆ ಸೇವೆ ಸಲ್ಲಿಸಿದ ವ್ಯಕ್ತಿಯಾಬ್ಬರಿಗೆ ಮೊದಲ ಬಾರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆತ ದಾಖಲೆ ಸೃಷ್ಟಿಯಾಗುತ್ತದೆ.
(ಏಜನ್ಸೀಸ್)
ವಾರ್ತಾ ಸಂಚಯ
ಮುಖಪುಟ / ವಾಟ್ಸ್ ಹಾಟ್












Click it and Unblock the Notifications