ತವರು ನೆಲದಿ ‘400 ಟೆಸ್ಟ್‌ ವಿಕೆಟ್‌ಕ್ಲಬ್‌’ಗೆ ಅನಿಲ್‌ಕುಂಬ್ಳೆ ಸೇರ್ಪಡೆ

ತವರು ನೆಲದಿ ‘400 ಟೆಸ್ಟ್‌ ವಿಕೆಟ್‌ಕ್ಲಬ್‌’ಗೆ ಅನಿಲ್‌ಕುಂಬ್ಳೆ ಸೇರ್ಪಡೆ
ಭಾರತದ ಅಗ್ರಮಾನ್ಯ ಸ್ಪಿನ್ನರ್‌ ದಾಖಲೆ ಪಟ್ಟಿಗೆ ಇನ್ನೊಂದು ಗರಿ

ಬೆಂಗಳೂರು :ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧ ದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಮೊದಲ ದಿನವೇ (ಅ.6ರ ಬುಧವಾರ) ಭಾರತದ ಹೆಮ್ಮೆಯ ಸ್ಪಿನ್ನರ್‌ ಅನಿಲ್‌ಕುಂಬ್ಳೆ 400 ವಿಕೆಟ್‌ ಸಾಧನೆ ಮೆರೆದಿದ್ದಾರೆ.

ಆಸ್ಟ್ರೇಲಿಯಾದ ಸೈಮನ್‌ ಕ್ಯಾಟಿಚ್‌ ಅವರನ್ನು ಬೋಲ್ಡ್‌ ಮಾಡುವ ಮೂಲಕ ಕುಂಬ್ಳೆ 400 ವಿಕೆಟ್‌ ಸಾಧನೆ ಮಾಡಿದರು. 33ರ ವಯಸ್ಸಿನ ಅನಿಲ್‌ ಕುಂಬ್ಳೆ ತಮ್ಮ 85ನೇ ಟೆಸ್ಟ್‌ ಪಂದ್ಯದಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ. ಈಮುನ್ನ 300 ವಿಕೆಟ್‌ ಪಡೆದ ಏಕೈಕ ಭಾರತೀಯ ಸ್ಪಿನ್ನರ್‌ ಎನ್ನುವ ಅಗ್ಗಳಿಕೆ ಹೊಂದಿದ್ದ ಕುಂಬ್ಳೆ, 400 ವಿಕೆಟ್‌ ಮೂಲಕ ತಮ್ಮ ಸಾಧನೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ. 434 ಟೆಸ್ಟ್‌ ವಿಕೆಟ್‌ ಗಳಿಸಿರುವ ಕಪಿಲ್‌ದೇವ್‌ ಅತಿಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದಿರುವ ಭಾರತೀಯ ಆಟಗಾರ.

ತವರು ನೆಲದಲ್ಲಿ 400 ವಿಕೆಟ್‌ ಸಾಧನೆ ಮೆರೆಯಲು ಕಾತರರಾಗಿರುವುದಾಗಿ ಕುಂಬ್ಳೆ ಪಂದ್ಯಕ್ಕೆ ಮುನ್ನ ತಿಳಿಸಿದ್ದರು. ಕುಂಬ್ಳೆ ಅವರ 400 ವಿಕೆಟ್‌ ಗುರಿ ನೆರವೇರಿದರೂ, ಆ ವಿಕೆಟ್‌ನ ಕ್ಯಾಚನ್ನು ತಾವೇ ಪಡೆಯಬೇಕೆನ್ನುವ ರಾಹುಲ್‌ದ್ರಾವಿಡ್‌ ಆಸೆ ನೆರವೇರಿಲ್ಲ . ಏಕೆಂದರೆ ಕುಂಬ್ಳೆಯ 400ನೇ ಬಲಿ ಕ್ಯಾಟಿಚ್‌ ಕ್ಯಾಚ್‌ ನೀಡಲೇ ಇಲ್ಲ . ಚೆಂಡಿನ ಗತಿ ಗುರ್ತಿಸುವಲ್ಲಿ ವಿಫಲರಾದ ಕ್ಯಾಟಿಚ್‌ ಬೋಲ್ಡಾದಾಗ ಮೈದಾನದಲ್ಲಿದ್ದ ಸಾವಿರಾರು ಪ್ರೇಕ್ಷಕರು ಚಪ್ಪಾಳೆ ತಟ್ಟುವ ಮೂಲಕ ಭಾರತದ ಅಗ್ರ ಸ್ಪಿನ್ನರ್‌ಗೆ ಅಭಿನಂದನೆ ಸಲ್ಲಿಸಿದರು.

ಪಂದ್ಯದ ಸ್ಕೋರ್‌ ವಿವರಗಳಿಗೆ ಕ್ಲಿಕ್ಕಿಸಿ

(ಏಜನ್ಸೀಸ್‌)

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+