ಧಾರ್ಮಿಕ ಭೇದಕ್ಕೆ ಇಂಗ್ಲೆಂಡ್ ನಿಷೇಧ ; ಹಿಂದೂ-ಮುಸ್ಲಿಂರಿಗೆ ನಿರಾಳ!
ಧಾರ್ಮಿಕ ಭೇದಕ್ಕೆ ಇಂಗ್ಲೆಂಡ್ ನಿಷೇಧ ; ಹಿಂದೂ-ಮುಸ್ಲಿಂರಿಗೆ ನಿರಾಳ!
ಧರ್ಮದ ಮೇಲೆ ಸೇವೆ, ಸವಲತ್ತು , ವಾಸಸ್ಥಳ ನಿರಾಕರಿಸುವಂತಿಲ್ಲ ...
ಧರ್ಮ ಅಥವಾ ನಂಬಿಕೆಗಳ ಕಾರಣದಿಂದಾಗಿ ವಸ್ತು , ಸೇವೆ, ವಾಸಸ್ಥಳ ಹಾಗೂ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ . ಈ ನಿಟ್ಟಿನಲ್ಲಿ ನೂತನ ಕಾನೂನು ಕಾಯ ನಿರ್ವಹಿಸುತ್ತದೆ. ಉದಾಹರಣೆಗೆ, ಅಂಗಡಿ ಮಾಲೀಕರೊಬ್ಬರು ಧರ್ಮ ಅಥವಾ ನಂಬಿಕೆ ಕಾರಣದಿಂದಾಗಿ ಸೇವೆ ನಿರಾಕರಿಸುವಂತಿಲ್ಲ ಎಂದು ಬ್ರಿಟನ್‌ನ ವಕ್ತಾರರೊಬ್ಬರು ಮಂಗಳವಾರ ತಿಳಿಸಿದರು.
ವ್ಯಕ್ತಿಗಳ ನಡುವೆ ತಾರತಮ್ಯ ಕಲ್ಪಿಸುವುದು ಇನ್ನುಮುಂದೆ ಸಾಧ್ಯವಿಲ್ಲ . ಆದರೆ ನಂಬಿಕೆಗಳನ್ನೇ ಆಧಾರವಾಗುಳ್ಳ ಶಾಲೆಗಳು ಮುಂದುವರೆಯಲು ಅವಕಾಶ ಕಲ್ಪಿಸಲಾಗುವುದು. ಅದೇ ರೀತಿ ದತ್ತಿಗಳನ್ನೂ ಮುಂದುವರಿಸಲಾಗುವುದು ಎಂದು ವಕ್ತಾರರು ಹೇಳಿದರು.
ಪ್ರಸ್ತುತ ವರ್ಣಭೇದಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನಲ್ಲಿರುವ ಕಾಯ್ದೆಗಳು ಸಿಖ್, ಜ್ಯೂಸ್ ಮುಂತಾದ ಸಮುದಾಯಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿವೆ. ಇದರಿಂದಾಗಿ ಹಿಂದೂ ಹಾಗೂ ಮುಸ್ಲಿಮರು ಕೆಲವು ಸಂದರ್ಭಗಳಲ್ಲಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದರು.
(ಪಿಟಿಐ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications