ಬೆಂಗಳೂರಲ್ಲಿ ಭಾರತೀಯ ತಂಡ ಕೂಡಿಕೊಂಡ ಸಚಿನ್ ತೆಂಡೂಲ್ಕರ್
ಬೆಂಗಳೂರಲ್ಲಿ ಭಾರತೀಯ ತಂಡ ಕೂಡಿಕೊಂಡ ಸಚಿನ್ ತೆಂಡೂಲ್ಕರ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸಚಿನ್ ಪಾಲ್ಗೊಳ್ಳುವ ಸಾಧ್ಯತೆ ಅಧಿಕ
ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ (ಅಕ್ಟೋಬರ್ 6) ದಿಂದ ಆರಂಭವಾಗುತ್ತಿದ್ದು , ಈ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಆಡುವ ಸಾಧ್ಯತೆಗಳು ಹೆಚ್ಚಿವೆ.
ಕಳೆದ ಕೆಲವು ವಾರಗಳಿಂದ ಸಚಿನ್ ಟೆನ್ನಿಸ್ ಮೊಣಕೈ ನೋವಿನಿಂದ (ಟೆನಿಸ್ ಎಲ್ಬೋ ಸಮಸ್ಯೆ) ಬಳುತ್ತಿರುವ ಸಚಿನ್ ಮೊದಲೆರಡು ಟೆಸ್ಟ್‌ಗಳಲ್ಲಿ ಪಾಲ್ಗೊಳ್ಳುವ ಕುರಿತು ಅನುಮಾನಗಳಿದ್ದವು. ಬಿಸಿಸಿಐ ವೈದ್ಯರಾದ ಅನಂತ್ ಜೋಷಿ ಹಾಗೂ ತಂಡದ ಫಿಟ್‌ನೆಸ್ ತರಬೇತುದಾರ ಆ್ಯಂಡ್ರೂ ಲೀಪಸ್ ಮಾರ್ಗದರ್ಶನದಲ್ಲಿ ಸಚಿನ್ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ.
ಶುಕ್ರವಾರ ಕ್ರಿಕೆಟ್ ಮಂಡಳಿ ಭಾರತ ತಂಡದ ಮೊದಲ ಎರಡು ಟೆಸ್ಟ್‌ಗಳ ಪಟ್ಟಿಯನ್ನು ಪ್ರಕಟಿಸಿತ್ತು. ಭಾರತೀಯ ತಂಡದ 15 ಆಟಗಾರದ ಪಟ್ಟಿಯಲ್ಲಿ ಸಚಿನ್ ಹೆಸರಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications