‘ಇಸ್ರೋ’ ಮೇಲಿನ ನಿರ್ಬಂಧ ಸಡಿಲಿಕೆ : ಅಮೆರಿಕದ ಪ್ರಯತ್ನಕ್ಕೆ ಸ್ವಾಗತ
‘ಇಸ್ರೋ’ ಮೇಲಿನ ನಿರ್ಬಂಧ ಸಡಿಲಿಕೆ : ಅಮೆರಿಕದ ಪ್ರಯತ್ನಕ್ಕೆ ಸ್ವಾಗತ
ಉನ್ನತ ತಂತ್ರಜ್ಞಾನ ವಾಣಿಜ್ಯ ವಹಿವಾಟು ಮೂರು ಪಟ್ಟು ಹೆಚ್ಚಳದ ನಿರೀಕ್ಷೆ
ತನ್ನ ಏಳು ಘಟಕಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಸಡಿಲಿಸುವ ಅಮೆರಿಕಾದ ನಿರ್ಧಾರ ಸ್ವಾಗತಾರ್ಹ. ನಿರ್ಬಂಧ ಸಡಿಲಿಸಿಲು ಅಮೆರಿಕ ತಾತ್ವಿಕ ಒಪ್ಪಿಗೆ ಸೂಚಿಸಿದ್ದು , ಇದು ಅನುಷ್ಠಾನಕ್ಕೆ ಬರಲು ಸ್ವಲ್ಪ ಕಾಲ ಹಿಡಿಯುತ್ತದೆ ಎಂದು ಇಸ್ರೋ ಅಧ್ಯಕ್ಷ ಜಿ.ಮಾಧವನ್ ನಾಯರ್ ಗುರುವಾರ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.
ಅಮೆರಿಕಾದ ಕಂಪನಿಗಳೊಂದಿಗೆ ಉನ್ನತ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಾಣಿಜ್ಯಕ್ಕೆ ನಾವು ಆಸಕ್ತರಾಗಿದ್ದೇವೆ. ನಿರ್ಬಂಧ ಸಡಿಲಿಕೆಯಿಂದಾಗಿ ಉನ್ನತ ಉಪಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕನ್ ಸಂಸ್ಥೆಗಳೊಂದಿಗಿನ ವಾಣಿಜ್ಯ ಮೂರು ಪಟ್ಟು ಹೆಚ್ಚಲಿದೆ ಎಂದು ನಾಯರ್ ಅಭಿಪ್ರಾಯಪಟ್ಟರು.
1998ರ ಫೋಖ್ರಾನ್ ಅಣುಸ್ಫೋಟಕ್ಕೆ ಸಂಬಂಧಿಸಿದಂತೆ ಇಸ್ರೋ ಮೇಲೆ ಅಮೆರಿಕಾ ನಿರ್ಬಂಧ ವಿಧಿಸಿತ್ತು .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications