ಬಳ್ಳಾರಿಗೆ ಬಡ್ತಿ: ಮಹಾನಗರಪಾಲಿಕೆಯಾಗಿ ಬಳ್ಳಾರಿ ನಗರಸಭೆ ಬದಲು
ಬಳ್ಳಾರಿಗೆ ಬಡ್ತಿ: ಮಹಾನಗರಪಾಲಿಕೆಯಾಗಿ ಬಳ್ಳಾರಿ ನಗರಸಭೆ ಬದಲು
ಏಳಕ್ಕೆ ಏರಿದ ರಾಜ್ಯದ ಮಹಾನಗರ ಪಾಲಿಕೆಗಳ ಸಂಖ್ಯೆ
ಬಿಸಿಲ ಬೆಂಗಾಡು ಆಗಿರುವ ಬಳ್ಳಾರಿಯತ್ತ ಎಲ್ಲರಿಗೂ ನಿರ್ಲಕ್ಷ್ಯ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿಯನ್ನು ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದ ಈ ಭಾಗದ ಮತದಾರರಿಗೆಭರವಸೆಗಳ ಹೊರತು, ಬೇರೇನೂ ದಕ್ಕಿರಲಿಲ್ಲ ಎನ್ನುವ ಆರೋಪಗಳ ನಡುವೆಯೇ ಬಳ್ಳಾರಿ ಮಹಾನಗರ ಪಾಲಿಕೆಯಾಗಿ ಘೋಷಣೆಯಾಗಿದೆ.
ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಗುಲ್ಪರ್ಗ, ಬೆಳಗಾವಿ ಮಹಾನಗರ ಪಾಲಿಕೆಗಳ ಸಾಲಿಗೆ ಬಳ್ಳಾರಿ ಸೇರಿದೆ. ಸರಕಾರದ ಮುಂದೆ ಶಿವಮೊಗ್ಗ, ಭದ್ರಾವತಿ, ತುಮಕೂರು, ಬಳ್ಳಾರಿ ನಗರಸಭೆಗಳನ್ನು ಮಹಾನಗರಪಾಲಿಕೆಯಾಗಿ ಪರಿವರ್ತಿಸುವ ಪ್ರಸ್ತಾವನೆಗಳು ಬಹಳ ಹಿಂದಿನಿಂದಲೂ ಇತ್ತು. ಈಗ ಬಳ್ಳಾರಿಗೆ ಮೋಕ್ಷ ದೊರಕಿದ್ದು, ಈ ಭಾಗದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications