ಬೆಂಗಳೂರು-ತೋರಣಗಲ್ ವಿಮಾನ ಸಂಚಾರಕ್ಕೆ ತಪ್ಪಿದ ಮುಹೂರ್ತ!
ಬೆಂಗಳೂರು-ತೋರಣಗಲ್ ವಿಮಾನ ಸಂಚಾರಕ್ಕೆ ತಪ್ಪಿದ ಮುಹೂರ್ತ!
ತಾಂತ್ರಿಕ ತೊಂದರೆಗಳಿಂದ ವಿಮಾನ ಸಂಚಾರ ಮುಂದಕ್ಕೆ
ತಾಂತ್ರಿಕ ತೊಂದರೆಗಳಿಂದಾಗಿ ವಿಮಾನ ಸಂಚಾರ ಮುಂದಕ್ಕೆ ಹೋಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್.ಜಯರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೀಕಾನ್ ಉಪಕರಣವನ್ನು ಹೊರತುಪಡಿಸಿದಂತೆ ವಿಮಾನ ಹಾರಾಟಕ್ಕೆ ಎಲ್ಲ ಸಿದ್ಧತೆಗಳೂ ಮುಗಿದಿವೆ ಎಂದು ಜಯರಾಂ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ವಿಮಾನ ನಿಲುಗಡೆಗೆ ಅಗತ್ಯವಾಗುವಂತೆ ನಿಲ್ದಾಣದ ಉದ್ದವನ್ನು 1600 ಮೀಟರ್‌ಗಳಿಗೆ ವಿಸ್ತರಿಸಲಾಗಿದೆ. ಅಗಲವನ್ನು 30 ಮೀಟರ್‌ಗೆ ವಿಸ್ತರಿಸಲಾಗಿದೆ. ರಾತ್ರಿ ನಿಲುಗಡೆ ಸವಲತ್ತುಗಳನ್ನೂ ಕಲ್ಪಿಸಲಾಗಿದ್ದು , ವಾಯು ಸಾರಿಗೆ ನಿಯಂತ್ರಣವನ್ನೂ ಅಳವಡಿಸಲಾಗಿದೆ ಎಂದು ಜಯರಾಂ ತಿಳಿಸಿದ್ದರು.
ಆಕ್ಷೇಪ : ಬಳ್ಳಾರಿಯಲ್ಲಿ ವಿಮಾನ ನಿಲ್ದಾಣವಿದ್ದಾಗಲೂ ತೋರಣಗಲ್‌ನಲ್ಲಿನ ಖಾಸಗಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಕುರಿತು ಬಳ್ಳಾರಿ ಜಿಲ್ಲಾ ರೈಲ್ವೆ ಕ್ರಿಯಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ತೋರಣಗಲ್ ಬಳ್ಳಾರಿಯಿಂದ 30 ಕಿಮೀ ದೂರವಿರುವುದರಿಂದ, ಬಳ್ಳಾರಿಯಲ್ಲಿನ ವಿಮಾನ ನಿಲ್ದಾಣವನ್ನೇ ಅಭಿವೃದ್ಧಿಪಡಿಸುವಂತೆ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ಒಟ್ಟಿನಲ್ಲಿ ಬಳ್ಳಾರಿ ಜಿಲ್ಲೆಗಿನ್ನೂ ವಾಯುಯೋಗ ಕೂಡಿಬಂದಂತಿಲ್ಲ !
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications