ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಎಲೆಕ್ಟ್ರಾನಿಕ್‌ಸಿಟಿಗೆ 9ಕಿಮೀ ಉದ್ದದ ಎಲಿವೇಟೆಡ್‌ ಸಾರಿಗೆ

By Staff
|
Google Oneindia Kannada News

ಬೆಂಗಳೂರು-ಎಲೆಕ್ಟ್ರಾನಿಕ್‌ಸಿಟಿಗೆ 9ಕಿಮೀ ಉದ್ದದ ಎಲಿವೇಟೆಡ್‌ ಸಾರಿಗೆ
ವಿಶೇಷ ಉದ್ದೇಶದ ವಾಹನ ಸಂಚರಿಸುವ 9 ಕಿಮೀ ಉದ್ದದ ಎಲಿವೇಟೆಡ್‌ ವಿನ್ಯಾಸ

ಬೆಂಗಳೂರು : ಭಾರತದ ಸಿಲಿಕಾನ್‌ ವ್ಯಾಲಿ ಎಂದು ಪರಿಗಣಿತವಾಗಿರುವ ಬೆಂಗಳೂರಿನಲ್ಲಿನ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೊಂದು ಸಂತಸದ ಸುದ್ದಿ .

ಬೆಂಗಳೂರು ಹಾಗೂ ಎಲೆಕ್ಟ್ರಾನಿಕ್‌ ಸಿಟಿಯ ನಡುವೆ 9 ಕಿಮೀ ಉದ್ದದ ಎಲಿವೇಟೆಡ್‌ ವಿನ್ಯಾಸವನ್ನು ರೂಪಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಟಿ.ಆರ್‌.ಬಾಲು ತಿಳಿಸಿದ್ದಾರೆ. ಬೆಂಗಳೂರಿನಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಹಳಷ್ಟು ಕಂಪನಿಗಳು ಎಲೆಕ್ಟ್ರಾನಿಕ್‌ ಸಿಟಿಯಲ್ಲಿದ್ದು - ವಿಶೇಷ ಉದ್ದೇಶದ ವಾಹನ 9 ಕಿಮೀ ಉದ್ದದ ಎಲಿವೇಟೆಡ್‌ ವಿನ್ಯಾಸದಲ್ಲಿ ಬೆಂಗಳೂರು ಹಾಗೂ ಎಲೆಕ್ಟ್ರಾನಿಕ್‌ ಸಿಟಿಯನ್ನು ಸಂಪರ್ಕಿಸಲಿದೆ ಎಂದು ಬಾಲು ಹೇಳಿದರು. ಸೆ.27ರ ಸೋಮವಾರ ಬಾಲು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಬಾಲು ಅವರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಜರಿದ್ದರು.

ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂದು ಇನ್ಫೋಸಿಸ್‌, ವಿಪ್ರೋ ಸೇರಿದಂತೆ ಅನೇಕ ಮಾಹಿತಿ ತಂತ್ರಜ್ಞಾನ ಕಂಪನಿಗಳು ಹುಯಿಲೆಬ್ಬಿಸುತ್ತಿರುವ ಸಂದರ್ಭದಲ್ಲಿ ಸಚಿವ ಬಾಲು ಪ್ರಕಟಿಸಿರುವ ಎಲಿವೇಟರ್‌ ಯೋಜನೆ ವಿಶೇಷ ಮಹತ್ವ ಪಡೆದಿದೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X