ವಿಧಾನಸೌಧ ತದ್ರೂಪಿ ವಿಕಾಸಸೌಧ ಕಾಮಗಾರಿ ನವಂಬರ್‌ಗೆ ಪೂರ್ಣ
ವಿಧಾನಸೌಧ ತದ್ರೂಪಿ ವಿಕಾಸಸೌಧ ಕಾಮಗಾರಿ ನವಂಬರ್‌ಗೆ ಪೂರ್ಣ
ಹೊಸ ಕಟ್ಟಡದಲ್ಲಿ ಹದಿನಾಲ್ಕು ಇಲಾಖೆಗಳಿಗೆ ಸ್ಥಳಾವಕಾಶ
ಸುಸಜ್ಜಿತ ಈ ಕಟ್ಟಡದಲ್ಲಿ ಹದಿನಾಲ್ಕು ಇಲಾಖೆಗಳು ಕಾರ್ಯನಿರ್ವಹಿಸಲಿವೆ. ಬಾಡಿಗೆ ಕಟ್ಟಡದಲ್ಲಿದ್ದ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವುದರಿಂದ ವಾರ್ಷಿಕ ಸುಮಾರು ಐದು ಕೋಟಿ ರೂಪಾಯಿ ಉಳಿತಾಯವಾಗಲಿದೆ.
ಸುಮಾರು 145 ಕೋಟಿ ವೆಚ್ಚದ ಈ ಕಟ್ಟಡ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಕನಸಿನ ಕೂಸು. ಹೀಗಾಗಿಯೇ ತಮ್ಮ ಅಧಿಕಾರವಧಿಯ ಕಡೆಯ ದಿನಗಳಲ್ಲಿ ಅಪೂರ್ಣ ಕಟ್ಟಡವನ್ನೇ ಉದ್ಘಾಟಿಸಿ, ಟೀಕೆಗೆ ಗುರಿಯಾಗಿದ್ದರು.
ವಿಕಾಸ ಸೌಧದಲ್ಲಿ ಮಂಜೂರಾಗಿರುವ ಇಲಾಖೆಗಳ ವಿವರ:
- ಮೊದಲ ಮಹಡಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಕಾರ್ಯದರ್ಶಿಗಳ ಕಚೇರಿ
- ಎರಡನೇ ಮಹಡಿಯಲ್ಲಿ ಸಮಾಜ ಕಲ್ಯಾಣ, ಇಂಧನ, ವಸತಿ, ಸಹಕಾರ ಸಚಿವರ ಕಚೇರಿ ಹಾಗೂ ಕಾರ್ಯದರ್ಶಿಗಳ ಕಚೇರಿ.
- ಮೂರನೇ ಮಹಡಿಯಲ್ಲಿ ಜಲ ಸಂಪನ್ಮೂಲ, ಲೋಕೋಪಯೋಗಿ ಸಚಿವರ ಕಚೇರಿ ಹಾಗೂ ಕಾರ್ಯದರ್ಶಿಗಳ ಕಚೇರಿ.
- ನಾಲ್ಕನೇ ಮಹಡಿಯಲ್ಲಿ ನಗರಾಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ, ಕಾರ್ಮಿಕ ಸಚಿವರ ಕಚೇರಿ ಹಾಗೂ ಕಾರ್ಯದರ್ಶಿಗಳ ಕಚೇರಿ.
- ವಿಕಾಸ ಸೌಧದ ನೆಲ ಮಾಳಿಗೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ನಾಗರೀಕ ವಿಮಾನಯಾನ ಕಚೇರಿ.
ಮುಖಪುಟ / ವಾರ್ತೆಗಳು












Click it and Unblock the Notifications