ಎಂಪ್ಲಾಯ್‌ಮೆಂಟ್‌ ಪಾರ್ಕ್‌: ರಾಜ್ಯ ಸರ್ಕಾರದ ವಿನೂತನ ಯೋಜನೆ

ಎಂಪ್ಲಾಯ್‌ಮೆಂಟ್‌ ಪಾರ್ಕ್‌: ರಾಜ್ಯ ಸರ್ಕಾರದ ವಿನೂತನ ಯೋಜನೆ
ಮೈಸೂರು, ಮಂಗಳೂರು, ಬೆಂಗಳೂರುಗಳಲ್ಲಿ ಖಾಸಗಿ ಸಹಯೋಗದೊಂದಿಗೆ ಉದ್ಯೋಗ ಪಾರ್ಕ್‌ ಸ್ಥಾಪನೆ.

ಬೆಂಗಳೂರು : ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ, ದೇಶದಲ್ಲೇ ಮೊಟ್ಟ ಮೊದಲನೆಯದು ಎನ್ನುವ ಖ್ಯಾತಿಯ ಉದ್ಯೋಗ ಪಾರ್ಕ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಖಾಸಗಿ ಸಹಯೋಗದಲ್ಲಿ ಉದ್ಯೋಗ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ಈ ಮಾದರಿಯ ಯೋಜನೆ ದೇಶದಲ್ಲೇ ಮೊದಲನೆಯದಾಗಿದೆ. ಈ ಕೇಂದ್ರಗಳು ಕೇವಲ ಉದ್ಯೋಗ ನೋಂದಣಿ ಕೆಲಸಕ್ಕೆ ಮಾತ್ರ ಸೀಮಿತವಾಗಿರದೆ, ವಿವಿಧ ಕೈಗಾರಿಕೆಗಳಲ್ಲಿನ ಬೇಡಿಕೆಯ ಅಧ್ಯಯನವನ್ನೂ ನಡೆಸಲಿವೆ ಎಂದು ಕಾರ್ಮಿಕ ಸಚಿವ ಎ. ತನ್ವೀರ್‌ ಸೇಠ್‌ ಸೆ.22ರ ಬುಧವಾರ ತಿಳಿಸಿದರು.

ಪ್ರತ್ಯಕ್ಷ ಉದ್ಯೋಗ ಕಲ್ಪಿಸುವುದು ಮಾತ್ರವಲ್ಲದೆ ಪರೋಕ್ಷ ಉದ್ಯೋಗ ಒದಗಿಸಲೂ ಎಂಪ್ಲಾಯ್‌ಮೆಂಟ್‌ ಪಾರ್ಕ್‌ಗಳು ಶ್ರಮಿಸಲಿವೆ. ನಿರುದ್ಯೋಗಿಗಳನ್ನು ವಂಚಿಸುವ ಪ್ರಕರಣಗಳನ್ನು ನಿಯಂತ್ರಿಸುವ ಅಧಿಕೃತ ಸಂಸ್ಥೆಯಾಗಿಯೂ ಈ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ ಎಂದು ಸೇಠ್‌ ಹೇಳಿದರು.

ಉದ್ಯೋಗ ಪಾರ್ಕ್‌ಗಳ ಯೋಜನೆಯನ್ನು ಪಕ್ಕಾಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸುತ್ತಿದೆ. ಮೈಸೂರು, ಮಂಗಳೂರು ಹಾಗೂ ಬೆಂಗಳೂರುಗಳಲ್ಲಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ ಬಂಡವಾಳ ತೊಡಗಿಸಲು ಖಾಸಗಿಯವರನ್ನು ಸಂಪರ್ಕಿಸಲಾಗುತ್ತಿದೆ ಎಂದು ಸೇಠ್‌ ಹೇಳಿದರು.

ವಿದೇಶಗಳಲ್ಲಿ ಉದ್ಯೋಗ ಕೇಂದ್ರವೊಂದನ್ನು ರೂಪಿಸುವ ಉದ್ದೇಶವೂ ಇದ್ದು , ಈ ಕೇಂದ್ರ ವಲಸೆ, ವೀಸಾ ಮತ್ತಿತರ ಸಮಸ್ಯೆಗಳನ್ನು ಒಂದೆಡೆಯಲ್ಲಿಯೇ ಪರಿಹರಿಸಲಿದೆ ಎಂದು ಸಚಿವ ತನ್ವೀರ್‌ ಸೇಠ್‌ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+