ಬೆಂಗಳೂರು ಕಮರ್ಷಿಯಲ್‌ಸ್ಟ್ರೀಟ್ ರಸ್ತೆಯಲ್ಲೀಗ ಏಕಮುಖ ಸಂಚಾರ
ಬೆಂಗಳೂರು ಕಮರ್ಷಿಯಲ್‌ಸ್ಟ್ರೀಟ್ ರಸ್ತೆಯಲ್ಲೀಗ ಏಕಮುಖ ಸಂಚಾರ
ಪ್ರಯಾಣದ ಕಿರಿಕಿರಿ ಕಡಿಮೆ ಮಾಡಲು ಸಂಚಾರಿನಿಯಮಗಳ ಕಸರತ್ತು
ಶಿವಾಜಿ ವೃತ್ತದಿಂದ ಬ್ರಾಡ್ವೆ ರಸ್ತೆ ಕಡೆಗೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಚಲಿಸುವ ವಾಹನಗಳ ಸಂಚಾರ ಯಥಾಸ್ಥಿತಿ ಯಲ್ಲಿರುತ್ತದೆ. ಆದರೆ ಬ್ರಾಡ್ವೆ ರಸ್ತೆಯಿಂದ ಶಿವಾಜಿ ವೃತ್ತದ ಕಡೆಗೆ ಉತ್ತರದಿಂದ ದಕ್ಷಿಣಕ್ಕೆ ಚಲಿಸುವ ಸಂಚಾರವನ್ನು ನಿಷೇಧಿಸಲಾಗಿದೆ.
ಪರಿಣಾಮ : ಥಾಮಸ್ ಕೆಫೆ ಜಂಕ್ಷನ್‌ನಿಂದ ಪೂರ್ವಕ್ಕೆ ಪ್ರಾಮಿನೇಡ್ ರಸ್ತೆಯಲ್ಲಿ ಸೇಂಟ್ ಜಾನ್ಸ್ ಚರ್ಚ್ ರಸ್ತೆ ಜಂಕ್ಷನ್‌ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅಲ್ಲದೇ ಸೇಂಟ್ ಜಾನ್ಸ್ ಚರ್ಚ್ ರಸ್ತೆಯ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ.
ಲಾಲ್‌ಬಾಗ್ 4ನೇ ಕ್ರಾಸ್ ರಸ್ತೆಯಲ್ಲಿ ಈಗಿರುವ ಪೂರ್ವದಿಂದ ಪಶ್ಚಿಮದ ಕಡೆಗಿನ ದ್ವಿಮುಖ ಸಂಚಾರ ವ್ಯವಸ್ಥೆ ಯಥಾಸ್ಥಿತಿಯಲ್ಲಿರುತ್ತದೆ. ಅಂದರೆ ಕೆಂಗಲ್ ಹನುಮಂತಯ್ಯ ರಸ್ತೆಯಿಂದ ಲಾಲ್‌ಬಾಗ್ 4ನೇ ಅಡ್ಡ ರಸ್ತೆಗೆ ಬರುವ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.
ಲಾಲ್‌ಬಾಗ್ ರಸ್ತೆಯಿಂದ 4ನೇ ಅಡ್ಡ ರಸ್ತೆಗೆ (ಪಶ್ಚಿಮದಿಂದ ಪೂರ್ವದ ಕಡೆಗೆ ) ಬರುತ್ತಿದ್ದ ಎಲ್ಲಾ ರೀತಿಯ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications