ಒಂಬತ್ತು ದಿನಗಳ ಪ್ರಧಾನಿ ಮನಮೋಹನ್ ವಿದೇಶ ಪ್ರವಾಸಕ್ಕೆಚಾಲನೆ
ಒಂಬತ್ತು ದಿನಗಳ ಪ್ರಧಾನಿ ಮನಮೋಹನ್ ವಿದೇಶ ಪ್ರವಾಸಕ್ಕೆಚಾಲನೆ
ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗವಹಿಸುವಿಕೆ, ಜಾಗತಿಕ ನಾಯಕರೊಂದಿಗೆ ಚರ್ಚೆ
ತಮ್ಮ ಒಂಬತ್ತು ದಿನದ ಪ್ರವಾಸ ಅವಧಿಯಲ್ಲಿ ಬ್ರಿಟನ್ ಮತ್ತು ಅಮೇರಿಕಕ್ಕೆ ಮನಮೋಹನ್‌ಸಿಂಗ್ ಭೇಟಿ ನೀಡುವರು. ಇದೇ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರೊಂದಿಗೆ ಎರಡೂ ದೇಶಗಳ ಆರ್ಥಿಕ ಸಹಕಾರಕ್ಕಾಗಿ ಜಂಟಿ ಒಪ್ಪಂದಕ್ಕೆ ಸಹಿ ಹಾಕುವರು.
ಮಂಗಳವಾರ ಬೆಳಗ್ಗೆ ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್ ಜೊತೆ ಪ್ರಧಾನಿ ಉಪಾಹಾರ ಕಾರ್ಯಕ್ರಮವಿದೆ. ಎರಡೂ ದೇಶಗಳ ನಡುವೆ ತಂತ್ರಜ್ಞಾನ ವರ್ಗಾವಣೆಗಾಗಿ ಒಪ್ಪಂದವೊಂದಕ್ಕೆ ಬುಷ್ ಮತ್ತು ಸಿಂಗ್ ಸಹಿ ಹಾಕುವರು. ಭಾರತ - ಅಮೆರಿಕ ನಡುವಿನ ಸಹಭಾಗಿತ್ವ ನೀತಿಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದೂ ಎರಡೂ ದೇಶಗಳು ಈಗಾಗಲೇ ಪ್ರಕಟಿಸಿದ್ದು, ಅಮೆರಿಕದ ರಫ್ತು ಪರವಾನಗಿ ನೀತಿಯಲ್ಲಿ ಮಾರ್ಪಾಡು ಮಾಡಲಾಗಿದೆ. ಇದರಿಂದಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಬಾಹ್ಯಕಾಶ ತಂತ್ರಜ್ಞಾನ ಹಸ್ತಾಂತರ, ನಾಗರಿಕ ಉದ್ದೇಶಗಳಿಗಾಗಿ ಅಣ್ವಸ್ತ್ರ ತಂತ್ರಜ್ಞಾನ ಹಸ್ತಾಂತರ ಸುಗಮವಾಗಲಿದೆ. ಅಮೆರಿಕ ಈ ಹಿಂದೆ ಇಸ್ರೊದ ಮೇಲೆ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಹಾಗೂ ರಷ್ಯಾ ಅಧ್ಯಕ್ಪ ವ್ಲಾಡಿಮಿರ್ ಪುಟಿನ್ ಹಾಗೂ ಆಫ್ಘಾನಿಸ್ತಾನ್,ಬ್ರೆಜಿಲ್, ಜರ್ಮನಿ, ಜಪಾನ್ ದೇಶಗಳ ನಾಯಕರೊಂದಿಗೂ ಮನಮೋಹನ್ ಸಿಂಗ್ ಮಾತುಕತೆ ನಡೆಸುವರು . ನ್ಯೂಯಾರ್ಕ್‌ನಲ್ಲಿ ಸೆ.23ರಂದು ವಿಶ್ವಸಂಸ್ಥೆ ವೇದಿಕೆಯಲ್ಲಿ ಮಾಡಲಿರುವ ಭಾಷಣದಲ್ಲಿ ಪ್ರಧಾನಿ ಸಿಂಗ್ ಭಯೋತ್ಪಾದನೆ ವಿರುದ್ದ ಸಮರ ತೀವ್ರಗೊಳಿಸುವಂತೆ ವಿಶ್ವದ ದೇಶಗಳಿಗೆ ಕರೆ ನೀಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications