ಸಾಹಿತ್ಯ ಪರಿಷತ್ ಗುರುತಿನ ಚೀಟಿಗಳಿಂದ ‘ಕನ್ನಡ ಅಂಕಿ’ಗಳು ಮಾಯ !
ಸಾಹಿತ್ಯ ಪರಿಷತ್ ಗುರುತಿನ ಚೀಟಿಗಳಿಂದ ‘ಕನ್ನಡ ಅಂಕಿ’ಗಳು ಮಾಯ !
ಪಠ್ಯಪುಸ್ತಕಗಳಲ್ಲಿ ಪಳೆಯುಳಿಕೆಗಳಾಗಿ ಮಾತ್ರ ಉಳಿದಿರುವ ಕನ್ನಡ ಅಂಕಿಗಳು...
ಅವರಿವರ ಮಾತು ಬಿಡಿ, ‘ಕನ್ನಡ ಕನ್ನಡ’ ಎನ್ನುವ ಕನ್ನಡಿಗರ ಅಧಿಕೃತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಕೂಡ ಕನ್ನಡ ಅಂಕಿಗಳನ್ನು ಬಳಸದಿದ್ದರೆ ಹೇಗೆ ? ಕನ್ನಡ ಸಾಹಿತ್ಯ ಪರಿಷತ್‌ನ ಗುರುತಿನ ಚೀಟಿಗಳಲ್ಲಿ ಹಿಂದೂ ಅರೇಬಿಕ್ ಅಂಕಿಗಳು ರಾರಾಜಿಸುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗಳು ನಡೆಯುತ್ತಿವೆ. ಮತದಾನಕ್ಕಾಗಿ ಗುರುತಿನ ಚೀಟಿ ಕಡ್ಡಾಯವಾದುದರಿಂದ ಗುರುತಿನ ಚೀಟಿ ವಿತರಣೆ ಕಾರ್ಯ ಭರದಿಂದ ನಡೆಯುತ್ತಿದೆ. ಈ ಚೀಟಿಗಳಲ್ಲಿ ಕನ್ನಡ ಅಂಕಿಗಳೇ ಮಾಯ ?
ದಿನಾಂಕ, ಗುರುತಿನ ಚೀಟಿ ಸಂಖ್ಯೆ, ಪಿನ್‌ಕೋಡ್ ಇತ್ಯಾದಿಯೆಲ್ಲ ಇಂಗ್ಲಿಷು ಮಯ ! ಪರಿಷತ್‌ನ ಕನ್ನಡ ನಿರ್ಲಕ್ಷ್ಯದ ಕುರಿತು ಕನ್ನಡ ಪ್ರೇಮಿಗಳೀಗ ಗುರ್ ಎನ್ನುತ್ತಿದ್ದಾರೆ. ಪುನರೂರು ಸಾಹೇಬರು ಎನ್ನುತ್ತಾರೊ ?
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications