ಚೆಲ್ಲಿ ಸೂಸೊ ಹಾಲಿನ ಮೋಕ್ಷಕ್ಕೆಹಾಸನ ಜಿಲ್ಲೆಯಲ್ಲೊಂದು ಪುಡಿ ಘಟಕ

ಚೆಲ್ಲಿ ಸೂಸೊ ಹಾಲಿನ ಮೋಕ್ಷಕ್ಕೆಹಾಸನ ಜಿಲ್ಲೆಯಲ್ಲೊಂದು ಪುಡಿ ಘಟಕ
ಮೈಸೂರು, ಹಾಸನ, ಮಂಡ್ಯ, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿನ ಹೆಚ್ಚುವರಿ ಹಾಲು ಪುಡಿಯಾಗಿ ಪರಿವರ್ತನೆ

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅತ್ಯಾಧುನಿಕ ಹಾಲುಪುಡಿ ಘಟಕವನ್ನು ಸ್ಥಾಪಿಸಲು ರಾಜ್ಯ ಹಾಲು ಒಕ್ಕೂಟ (ಕೆಎಂಎಫ್‌) ನಿರ್ಧರಿಸಿದೆ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 100 ಕೋಟಿ ರುಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಹಾಲುಪುಡಿ ಘಟಕ ಸ್ಥಾಪಿಸಲಾಗುವುದು. ಇದರಿಂದಾಗಿ ಮೈಸೂರು, ಹಾಸನ, ಮಂಡ್ಯ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿನ ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸುವುದು ಸುಲಭವಾಗಲಿದೆ ಎಂದು ಹಾಸನ ಹಾಲು ಒಕ್ಕೂಟದ ಕಾರ್ಯಕಾರಿ ನಿರ್ದೇಶಕ ಬಿ.ಪಿ.ರಂಗನಾಥ್‌ ತಿಳಿಸಿದ್ದಾರೆ.

ಪ್ರಸ್ತುತ ಹಾಸನ ಹಾಲು ಒಕ್ಕೂಟ ವ್ಯಾಪ್ತಿಯ 670 ಹಾಲು ಸಂಘಗಳಲ್ಲಿ ಪ್ರತಿದಿನ 2.25 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವುದು 65 ಸಾವಿರ ಲೀಟರ್‌ ಹಾಲಿಗೆ ಮಾತ್ರ. 80 ಸಾವಿರ ಲೀಟರ್‌ ಹಾಲನ್ನು ದಕ್ಷಿಣಕನ್ನಡ, ಕೇರಳ ಹಾಗೂ ಮಹಾರಾಷ್ಟ್ರದ ಬಾರಾಮತಿಗಳಿಗೆ ಕಳುಹಿಸಲಾಗುತ್ತಿದೆ ಎಂದು ರಂಗನಾಥ್‌ ಹೇಳಿದರು.

ಮಾರುಕಟ್ಟೆಯ ನಂತರ ಮಿಗುವ 80 ಸಾವಿರ ಲೀಟರ್‌ ಹಾಲನ್ನು ಮದರ್‌ ಡೈರಿಗೆ ಪುಡಿಯಾಗಿ ಪರಿವರ್ತಿಸಲು ಕಳುಹಿಸಲಾಗುವುದು. ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಹಾಲಿನ ಪುಡಿ ಘಟಕ ಮಹತ್ವ ಪಡೆದಿದೆ ಎಂದು ರಂಗನಾಥ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+