ಕಿರಿಯರ 18ನೇ ಏಷ್ಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್‌ಷಿಪ್‌ಗೆ ಕಣಸಜ್ಜು
ಕಿರಿಯರ 18ನೇ ಏಷ್ಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್‌ಷಿಪ್‌ಗೆ ಕಣಸಜ್ಜು
ಮಂಗಳವಾರ ಹಾಂಗ್‌ಕಾಂಗ್-ಭಾರತ ಹಣಾಹಣಿ
ಹದಿನಾರು ರಾಷ್ಟ್ರಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಬೆಂಗಳೂರು ಬಾಸ್ಕಟ್‌ಬಾಲ್ ಸಂಸ್ಥೆ ಈ ಪಂದ್ಯಾವಳಿ ಆಯೋಜಿಸಿದೆ. ಈ ಪಂದ್ಯಾವಳಿಯನ್ನು ಮುಖ್ಯ ಮಂತ್ರಿ ಧರ್ಮ್‌ಸಿಂಗ್ ಉದ್ಘಾಟಿಸಲಿದ್ದಾರೆ.
ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯುವುದು ಎಂದು ಕರ್ನಾಟಕ ಒಲಿಂಪಿಕ್ಸ್‌ಸಂಸ್ಥೆ ಅಧ್ಯಕ್ಷ ಮತ್ತು ಕ್ರೀಡಾ ಸ್ಪರ್ಧೆಯ ಕಾರ್ಯದರ್ಶಿ ಕೆ. ಗೋವಿಂದರಾಜ್ ತಿಳಿಸಿದ್ದಾರೆ.
ಭಾರತ ‘ಡಿ’ ಗುಂಪಿನಲ್ಲಿ ಹಾಂಗ್‌ಕಾಂಗ್ ಮತ್ತು ಯೆಮೆನ್ ಜೊತೆಯಿದ್ದು , ಸೆ.14ರಂದು ಮೊದಲ ಪಂದ್ಯವನ್ನು ಹಾಂಕ್‌ಕಾಂಗ್ ವಿರುದ್ಧ ಆಡಲು ಸಿದ್ಧವಾಗಿದೆ. ಕಳೆದ ಪಂದ್ಯಾವಳಿಯಲ್ಲಿ ಚೀನಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications