ಅರಮನೆ ಮೈದಾನದಲ್ಲಿ ಬೃಹತ್‌ ‘ಪುಸ್ತಕ ಮೇಳ’ ; ಒಮ್ಮೆ ಹೋಗಿ ಬನ್ನಿ !

ಅರಮನೆ ಮೈದಾನದಲ್ಲಿ ಬೃಹತ್‌ ‘ಪುಸ್ತಕ ಮೇಳ’ ; ಒಮ್ಮೆ ಹೋಗಿ ಬನ್ನಿ !
ಪುಸ್ತಕದ ಕೊಯಿಲಿಗೆ ಕಣ ಸಜ್ಜಾಗಿದೆ, ನೀವು ಪುರುಸೊತ್ತು ಮಾಡಿಕೊಳ್ಳುವುದೊಂದೇ ಬಾಕಿ.

ಬೆಂಗಳೂರು : ಪುಸ್ತಕ ಪ್ರೇಮಿಗಳಿಗೊಂದು ಸುಗ್ಗಿ ಸಮಾಚಾರ ! ಅಕ್ಷರ ಪ್ರಿಯರ ಮನತಣಿಸಲು ಬೃಹತ್‌ ಪ್ರಮಾಣದ ಪುಸ್ತಕ ಮೇಳ ಬೆಂಗಳೂರಿನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ.

ಅರಮನೆ ಮೈದಾನದಲ್ಲಿ ಸೆ.10ರ ಶುಕ್ರವಾರದಿಂದ ಆರಂಭವಾಗುವ ಪುಸ್ತಕ ಮೇಳವು 300 ಕ್ಕೂ ಹೆಚ್ಚು ಸ್ಟಾಲುಗಳನ್ನು ಹೊಂದಿದೆ ಎಂದು ಪುಸ್ತಕೋತ್ಸವದ ಸಂಚಾಲಕ ಉಲ್ಲಾಸ ಕುಮಾರ ತಿಳಿಸಿದ್ದಾರೆ. ಸಿನಿಮಾ ಚಳವಳಿಯಿಂದ ಹಗ್ಗ ಜಗ್ಗಾಟದಿಂದ ಬೇಸತ್ತ ಬೆಂಗಳೂರಿನ ಜನತೆಗೆ ಈ ಪುಸ್ತಕ ಮೇಳ ಉಲ್ಲಾಸ ನೀಡುವ ದಾರಿಯಾಗಬಹುದು.

ಕಳೆದ ವರ್ಷ ಕೂಡ ಅರಮನೆ ಮೈದಾನದಲ್ಲಿ ಬೃಹತ್‌ ಪ್ರಮಾಣದ ಪುಸ್ತಕ ಮೇಳ ಏರ್ಪಡಿಸಲಾಗಿತ್ತು . ಆ ಮೇಳದಲ್ಲಿ 1.5 ಲಕ್ಷ ಜನ ಭಾಗವಹಿಸಿದ್ದು , 6 ಕೋಟಿ ರೂ. ಲಾಭ ಸಂಗ್ರಹವಾಗಿತ್ತು. ಈ ವರ್ಷ 2ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದ್ದು, 10 ಕೋಟಿ ರೂ . ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ಉಲ್ಲಾಸ್‌ ತಿಳಿಸಿದರು.

ಈ ಬಾರಿಯ ಪುಸ್ತಕ ಮೇಳದ ವಿಶೇಷತೆಯೆಂದರೆ ಕನ್ನಡ ಪುಸ್ತಕ ಪ್ರಕಾಶಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಪುಸ್ತಕ ಸ್ಟಾಲ್‌ಗಳು 40 ಕ್ಕೂ ಹೆಚ್ಚು ದಾಟಲಿದ್ದು ಇದು ಕನ್ನಡ ಓದುಗರಿಗೆ ಒಂದು ಸುವರ್ಣವಕಾಶವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+