ಗೊಂದಲರಹಿತ ಪರಿಸರದಿ ಸಿಇಟಿ ಕೌನ್ಸೆಲಿಂಗ್ ಸೆ.10ರಿಂದ ಪ್ರಾರಂಭ
ಗೊಂದಲರಹಿತ ಪರಿಸರದಿ ಸಿಇಟಿ ಕೌನ್ಸೆಲಿಂಗ್ ಸೆ.10ರಿಂದ ಪ್ರಾರಂಭ
ಈ ಬಾರಿ ವೈದ್ಯಕೀಯ ಪ್ರವೇಶಕ್ಕೆ ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಇಲ್ಲ
ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ನ್ನು ಸೆ.10ರಿಂದ ಪ್ರಾರಂಭಿಸಲು ಸಾಮಾನ್ಯ ಪ್ರವೇಶ ಪರೀಕಾ ಘಟಕ ಸೆ.7ರಂದು ಅಧಿಸೂಚನೆ ಹೊರಡಿಸಿತು. ಈ ಬಾರಿ ವೈದ್ಯಕೀಯ ಕೋರ್ಸುಗಳಿಗೆ ಕರ್ನಾಟಕೇತರ ಕೋಟಾಕ್ಕೆ ಕೌನ್ಸೆಲಿಂಗ್ ನಡೆಯುವುದಿಲ್ಲ . ಆದರೆ ಇಂಜಿನಿಯರಿಂಗ್ ಪ್ರವೇಶಕ್ಕೆ ಸಂಬಂಧಿಸಿದಂತೆ ಶೇ.10 ಸೀಟುಗಳಿಗೆ ಕರ್ನಾಟಕೇತರ ಕೋಟಾದ ಕೌನ್ಸೆಲಿಂಗ್ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸೀಟು ಹಂಚಿಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕಾಮೆಡ್-ಕೆ ನಡುವಣ ತಿಕ್ಕಾಟದಿಂದಾಗಿ ಸಿಇಟಿ ಕೌನ್ಸೆಲಿಂಗ್ ಪದೇಪದೇ ಸ್ಥಗಿತಗೊಂಡಿತ್ತು . ಪ್ರಸ್ತುತ ಉಭಯ ಬಣಗಳು ಒಪ್ಪಂದಕ್ಕೆ ಬಂದಿರುವುದರಿಂದ ಸಮಸ್ಯೆ ಬಗೆಹರಿದಿದ್ದು , ಕೌನ್ಸೆಲಿಂಗ್ ದಾರಿ ಸುಗಮವಾಗಿದೆ.
ಸಿಇಟಿ ಬಿಕ್ಕಟ್ಟಿನಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಸಾಕಷ್ಟು ಸಮಯ ಈಗಾಗಲೇ ನಷ್ಟವಾಗಿದೆ. ಈ ನಷ್ಟವನ್ನು ತುಂಬಿಕೊಡುವ ಉದ್ದೇಶದಿಂದ ಭಾನುವಾರವೂ ಇಂಜಿನಿಯರಿಂಗ್ ತರಗತಿಗಳನ್ನು ನಡೆಸುವ ಕುರಿತು ಚಿಂತನೆ ನಡೆಯುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications