ಬಸವನಗುಡಿ ರಾಮಕೃಷ್ಣ ಮಠಕ್ಕೆನೂರು, ಡಿ.25ರಿಂದ ಸಾಲು ಸಂಭ್ರಮ
ಬಸವನಗುಡಿ ರಾಮಕೃಷ್ಣ ಮಠಕ್ಕೆನೂರು, ಡಿ.25ರಿಂದ ಸಾಲು ಸಂಭ್ರಮ
13 ತಿಂಗಳುಗಳ ಕಾಲ ಶತಮಾನೋತ್ಸದ ಅಂಗವಾಗಿ ವಿವಿಧ ಚಟುವಟಿಕೆಗಳು
ಡಿಸೆಂಬರ್ ಕೊನೆಯ ಭಾಗದಲ್ಲಿ ಆರಂಭಗೊಳ್ಳುವ ಶತಮಾನೋತ್ಸವ ಕಾರ್ಯಕ್ರಮಗಳು ದೀರ್ಘಕಾಲ ನಡೆಯಲಿವೆ. ಸುಮಾರು 13 ತಿಂಗಳುಗಳ ಕಾಲ ವಿವಿಧ ಚಟುವಟಿಕೆಗಳನ್ನು ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲು ಮಠ ಉದ್ದೇಶಿಸಿದೆ ಎಂದು ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ತಿಳಿಸಿದ್ದಾರೆ.
ಅಂದಹಾಗೆ, ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಮೊನ್ನೆ ಆಗಸ್ಟ್ 12ಕ್ಕೆ ಮಠಕ್ಕೆ ನೂರು ವರ್ಷ ತುಂಬಿದೆ. ರಾಮಕೃಷ್ಣ ಪರಮಹಂಸ ಹಾಗೂ ಶಾರದಾದೇವಿಯ ನೆನಪುಗಳುಳ್ಳ ಈ ಆಶ್ರಮ ಸಿಲಿಕಾನ್ ವ್ಯಾಲಿಯ ಅತ್ಯಂತ ನೆಮ್ಮದಿಯ ತಾಣಗಳಲ್ಲೊಂದಾಗಿದೆ.
ಶತಮಾನೋತ್ಸವದ ಕಾರ್ಯಕ್ರಮಗಳು ವಿಶಿಷ್ಟವಾಗಿದ್ದು , ಅಪ್ಪಟ ಧಾರ್ಮಿಕ ಕಾರ್ಯಕ್ರಮಗಳಾಗಿರುತ್ತವೆ ಎಂದೂ ಸ್ವಾಮಿ ಹರ್ಷಾನಂದ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications