ದಿನವಿಡೀ ಕನ್ನಡ ಬಿತ್ತರಿಸುವ ಜಗತ್ತಿನ ಮೊದಲ ಕನ್ನಡ ಚಾನಲ್ ‘ಸ್ಪರ್ಶ’
ದಿನವಿಡೀ ಕನ್ನಡ ಬಿತ್ತರಿಸುವ ಜಗತ್ತಿನ ಮೊದಲ ಕನ್ನಡ ಚಾನಲ್ ‘ಸ್ಪರ್ಶ’
ಕನ್ನಡದಲ್ಲಿ ವಿಸ್ತರಣೆಗೊಂಡ ವರ್ಲ್ಡ್ ಸ್ಪೇಸ್ ಕಂಪನಿ ರೇಡಿಯಾ ಜಾಲ
ಚಿತ್ರ ಗೀತೆಗಳಿಗೆ ಆದ್ಯತೆ ನೀಡಿದರೂ, ಭಾವಗೀತೆ, ಭಕ್ತಿಗೀತೆ, ಸಂದರ್ಶನ, ಹಾಸ್ಯ, ಸುಗಮ ಸಂಗೀತ, ಯಕ್ಷಗಾನ, ಕವಿಗೋಷ್ಠಿ, ಕಲೆ, ಆರೋಗ್ಯ, ಕ್ರೀಡೆ, ರಾಜಕೀಯ ಹೀಗೆ ಹತ್ತಾರು ವೈವಿಧ್ಯಮಯ ಸಂಗತಿಗಳೊಂದಿಗೆ ಜಗತ್ತಿನ ಮೊದಲ ಕನ್ನಡ ಚಾನೆಲ್ ಆಗಿರುವ ‘ಸ್ಪರ್ಶ’ ಎಲ್ಲರನ್ನು ರಂಜಿಸಲಿದೆ ಎಂದು ಚಾನೆಲ್ ನಿರ್ದೇಶಕ ಆರ್.ಜೆ. ಚೈತನ್ಯ ಹೆಗಡೆ ತಿಳಿಸಿದ್ದಾರೆ.
ಈಗಾಗಲೇ ತಮಿಳು, ಮಲಯಾಳಂ ಭಾಷೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವರ್ಲ್ಡ್ ಸ್ಪೇಸ್ ಕಂಪನಿ ಕನ್ನಡದಲ್ಲಿ ತನ್ನ ಜಾಲವನ್ನು ವಿಸ್ತರಿಸಿದೆ. ಅಮೇರಿಕಾದ ವಾಷಿಂಗ್‌ಟನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಚಾನಲ್ ನಿಮಗೆ
ಬೇಕಾದರೆ ವಾರ್ಷಿಕ ಚಂದಾ ಹಣ 1200 ರು. ಪಾವತಿಸಬೇಕಾಗುತ್ತದೆ. ಅಲ್ಲದೇ 3999 ರು. ನೀಡಿ ರಿಸೀವರ್ ಖರೀದಿಸುವುದು ಅನಿವಾರ್ಯ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications